This is the title of the web page
This is the title of the web page

Please assign a menu to the primary menu location under menu

Local News

ಕ್ಷೇತ್ರದ ಜನತೆಗೆ ರಾಕಿ ಕಟ್ಟಿ ರಕ್ಷಾಬಂಧನ ಆಚರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್


ಬೆಳಗಾವಿ: ಗುರುವಾರ ದಿನಾಂಕ 12 ಆಗಸ್ಟ್ ರಂದು ಕುವೆಂಪು ನಗರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮನೆಯ ಸುತ್ತಮುತ್ತ ಜನಸಾಗರ ನೆರೆದು, ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

ಬೆಳಗಾವಿಯ ಗ್ರಾಮೀಣ ಕ್ಷೇತ್ರದಿಂದ ಹಾಗೂ ನಗರದ ವಿವಿಧ ಕಡೆಗಳಿಂದ ಬಂದಂತ ಸಾವಿರಾರು ಜನರು ಸಿಹಿ ಹಾಗೂ ಪುಷ್ಪಗುಚ್ಛದೊಂದಿಗೆ ಬಂದು, ಸಹೋದರತೆ ಸಂಬಂಧ ಸಾರುವ ರಕ್ಷಾಬಂಧನದ ಅಂಗವಾಗಿ ರಾಕಿ ಕಟ್ಟಿಸಿಕೊಂಡರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಜನರ ಮೇಲೆ ಎಷ್ಟು ಕಾಳಜಿ, ಪ್ರೀತಿ, ಇದೆ ಎನ್ನುವುದಕ್ಕೆ ಈ ರಾಖಿ ಕಟ್ಟುವ ವಿಶೇಷ ಕಾರ್ಯಕ್ರಮ ನಿದರ್ಶನವಾಯಿತು, ಬೆಳಿಗ್ಗೆ 8 ಗಂಟೆಯಿಂದ ಸಂಜೆ 4ರ ವರೆಗೆ ನಿರಂತರವಾಗಿ ಸರದಿ ಸಾಲಿನಲ್ಲಿ ಬಂದಂತ ಸಹೋದರರಿಗೆ ರಾಖಿ ಕಟ್ಟುವ ಮೂಲಕ ಶಾಸಕಿಯವರು ತಮ್ಮ ಕಾಳಜಿ ಮಮತೆಗೆ ಮತ್ತೊಮ್ಮೆ ನಿದರ್ಶನವಾದರು.

ಪುರುಷ, ಮಹಿಳೆಯರು ಎನ್ನದೇ ಸುಮಾರು 5 ರಿಂದ 6 ಸಾವಿರ ಜನರು ಬಂದು, ಹಬ್ಬದ ವಾತಾವರಣ ನಿರ್ಮಾಣ ಮಾಡಿ, ಶಾಸಕಿಯವರ ಮೇಲಿನ ತಮ್ಮ ಅಭಿಮಾನ ಮೆರೆದರು, ಇನ್ನೂ ಬಂದಂತ ಎಲ್ಲಾ ಜನತೆಗೆ ಕುಳಿತುಕೊಳ್ಳಲು ಆಸನ, ಉಪಹಾರ, ಚಹಾ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಚನ್ನಾರಾಜ ಹಟ್ಟಿಹೊಳಿ ಅವರು, ಗ್ರಾಮೀಣ ಜನತೆಯ ಮನೆಮಗಳು, ಕ್ಷೇತ್ರದ ಎಲ್ಲಾ ಜನತೆಯ ಸಹೋದರಿಯಾಗಿ ಇರ್ತೀನಿ ಅಂತ 9 ವರ್ಷದ ಹಿಂದೆಯೇ ಮಾತು ಕೊಟ್ಟಿದ್ರು, ಅದೇ ರೀತಿ ಇಂದು ಮುಂದು ಯಾವತ್ತಿಗೂ ಕೂಡಾ ಶಾಸಕಿಯವರೂ ಜನರೊಂದಿಗೆ ಇರುತ್ತಾರೆ ಎಂದು ಹೇಳಿದರು.

ಅಣ್ಣ ತಮ್ಮಂದಿರ, ಅಕ್ಕ ತಂಗಿಯರ ಈ ರಕ್ಷಾಬಂಧನ ಹಬ್ಬವನ್ನು ಬಹಳ ಹುಮ್ಮಸಿನಿಂದ ಜನ ಬಂದು ಆಚರಣೆ ಮಾಡ್ತಾ ಇದಾರೆ, ಇದು ಅಕ್ಕಾರ ಮೇಲಿನ ಜನರ ಪ್ರೀತಿ, ಮತ್ತು ಅಕ್ಕಾ ಅವರಿಗೆ ಜನರ ಮೇಲಿರುವ ಪ್ರೀತಿ ಅಷ್ಟೇ, ಇಲ್ಲಿ ನಮ್ಮ ಮತ್ತು ಜನರ ಮದ್ಯ ನಿಜವಾದ ಭಾಂದವ್ಯ ಇದೆ, ಕ್ಷೇತ್ರದ ಸಣ್ಣ ಕಾರ್ಯಕ್ರಮ ಇದ್ರೂ ನೂರಾರು ಜನ ಸರ್ತಾರೆ, ಇದಕ್ಕೆಲ್ಲ ಶಾಸಕಿಯವರ ಮಾತೃ ಹೃದಯವೇ ಕಾರಣ ಎಂದರು.

ಜನರ ಕಷ್ಟ, ಸಮಸ್ಯಗಳಿಗೆ ಯಾವತ್ತೂ ಸ್ಪಂದನೆ ಮಾಡ್ತಾರೆ, ಜನರ ಸರ್ವಾಂಗೀಣ ಬೆಳವಣಿಗೆ ಮಾಡ್ತಾರೆ, ಅದರ ಪ್ರತಿಫಲವೇ ಇವತ್ತು ಈ ಈ ಜನರ ಪ್ರೀತಿ ಎಂದರು.

ಇನ್ನು ಶಾಸಕಿಯವರ ಸುಪುತ್ರ ಮೃಣಾಲ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರ ಇದೊಂದು ಮಾದರಿ ಕ್ಷೇತ್ರ, ಅತೀ ದೊಡ್ಡ ಜನಬೆಂಬಲದುಂದ ಆರಿಸಿ ತಂದವರು ನಮ್ಮ ಜನ, ಅದೇರೀತಿ ನಮ್ಮ ಶಾಸಕರೂ ಕೂಡಾ ಅತಿವೃಷ್ಟಿಯಲ್ಲಿ, ಕರೋನ ಸಮಯದಲ್ಲಿ, ಎಲ್ಲಾ ಕಷ್ಟಗಳಲ್ಲಿ ಅವರ ಮನೆಗಳಿಗೆ ತೆರಳಿ ಅವರ ಜೊತೆಗೆ ಇದ್ದಾರೆ, ಅದೇ ಪ್ರೀತಿನ ಜನರು ನೀಡ್ತಾ ಇದಾರೆ, ಅದಕ್ಕೆ ಇದೊಂದು ಮಾದರಿ ಕ್ಷೇತ್ರ ಎನ್ನಬಹುದು ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಸದಸ್ಯರು, ನಗರ ಸೇವಕರು, ಪಕ್ಷದ ಹಲವಾರು ಪದಾಧಿಕಾರಿಗಳು, ಮಹಿಳಾ ಸಂಘಟನೆಗಳು, ಅಭಿಮಾನಿಗಳು, ಕ್ಷೇತ್ರದ ಸಾವಿರಾರು ಜನರು ಉಪಸ್ಥಿತರಿದ್ದರು.


Gadi Kannadiga

Leave a Reply