This is the title of the web page
This is the title of the web page

Please assign a menu to the primary menu location under menu

Local News

ಅಗ್ನಿ ಅನಾಹುತದಿಂದ ಸಂತ್ರಸ್ತ ಕುಟುಂಬಕ್ಕೆ ಸಹಾಯ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್


ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದ ರಮೇಶ ಸುತಾರ ಎಂಬುವವರು ಮನೆ ಆಕಸ್ಮಿಕ ಬೆಂಕಿ ಅನಾಹುತದಿಂದ ಸುಟ್ಟು ನಾಶವಾಗಿದೆ.

ವಿಷಯ ತಿಳಿದ ತಕ್ಷಣ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಅವರನ್ನು ಸಂತ್ರಸ್ತರ ಬಳಿ ಕಳುಗಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, “ಯಾವುದೇ ಕಾರಣಕ್ಕೂ ಭಯಪಡಬೇಡಿ, ನಿಮ್ಮ ಜೊತೆ ನಾವಿದ್ದೇವೆ” ಎಂದು ಸಂತೈಸಿದರಲ್ಲದೆ, ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಧನ ಸಹಾಯವನ್ನು ಕೊಡಿಸಿದ್ದಾರೆ.

ಇದರ ಜೊತೆಗೆ ಬಟ್ಟೆ ಬರೆ, ಪಾತ್ರೆಗಳು, ಹಾಸಿಗೆ, ಹೊದಿಕೆಗಳನ್ನು ನೀಡಿ, ಅಗತ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಸಂತ್ರಸ್ತ ಕುಟುಂಬಕ್ಕೆ ಭರವಸೆ ನೀಡಲಾಯಿತು.

ರಮೇಶ ಸುತಾರ ಅವರ ಕುಟುಂಬಕ್ಕೆ ಸಾರ್ವಜನಿಕರು ಸಹಾಯ ಮಾಡಲು ಬಯಸಿದರೆ ಅವರ ಬ್ಯಾಂಕ್ ಖಾತೆಯ ಫೋನ್ ಪೇ ನಂಬರ್ Phone Pay • 7975120262 ಗೆ ಧನ ಸಹಾಯ ಅಥವಾ ವಸ್ತುಗಳ ರೂಪದಲ್ಲಿ ನೆರವು ನೀಡಬಹುದು.


Gadi Kannadiga

Leave a Reply