This is the title of the web page
This is the title of the web page

Please assign a menu to the primary menu location under menu

Local News

ದೇಸೂರು ಗ್ರಾಮಕ್ಕೆ 22 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್


ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ 22 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಮಂಗಳವಾರ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಕಳೆದ 4 ವರ್ಷದಲ್ಲಿ ಕ್ಷೇತ್ರದ ಯಾವ ಭಾಗದ ಜನರನ್ನೂ ನಿರಾಸೆಗೊಳಿಸದೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಿಸಿದ್ದೇನೆ. ನನ್ನ ಮೇಲಿಟ್ಟ ವಿಸ್ವಾಸಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡುತ್ತಿದ್ದೇನೆ ಎನ್ನುವ ತೃಪ್ತಿ ನನಗಿದೆ. ಮುಂದಿನ ದಿನಗಳಲ್ಲಿ ಹಲವಾರು ದೊಡ್ಡ ದೊಡ್ಡ ಯೋಜನೆಗಳನ್ನು ತರುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿದ್ದೇನೆ ಎಂದು ಹೇಳಿದರು.

ಕ್ಷೇತ್ರದ ಜನರ ಸಣ್ಣ ಸಣ್ಣ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದೇನೆ. ಆರೋಗ್ಯ, ಶಿಕ್ಷಣ, ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ನೀಡಿದ್ದೇನೆ. ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೂ ಹೆಚ್ಚಿನ ಅನುದಾನ ನೀಡಿದ್ದೇನೆ. ಜನರು ಪ್ರೀತಿ, ವಿಶ್ವಾಸದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಹ ನಿಮ್ಮೆಲ್ಲರ ಆಶಿರ್ವಾದ ನನ್ನ ಮೇಲಿರಲಿ ಎಂದು ಅವರು ವಿನಂತಿಸಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಸಂತೋಷ ಮರಗಾಳೆ, ಗಣಪತ ಪಾಟೀಲ, ಸತೀಶ್ ಚೌಹಾಣ, ವೆಂಕಟ ಪಾಟೀಲ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ನಾಗರಾಜ ಸಾವಂತ, ನಿಖಿತಾ ಸುತಾರ, ಲಕ್ಷ್ಮೀ ಪಾಟೀಲ, ಸಾತೇರಿ ಕಳಸೇಕರ್, ಶ್ಯಾಮ್ ಗೋವೆಕರ್, ಸಂಕೇತ ಪಾಟೀಲ, ನಿಲೇಶ್ ಸುತಾರ, ಭುಜಂಗ ಗುರವ, ಬಾಬು ಪಾಟೀಲ, ಪ್ರಸಾದ ಗುರವ, ಸಚಿನ ಅವಚಾರಿ, ಸೋಮನಾಥ ಗೋರೆ, ಪ್ರಕಾಶ ಮರಕಟ್ಟಿ, ಚಂದ್ರಕಾಂತ ಹರಿಜನ, ಗೀತಾ ಮುಗೂರವಾಡಿ, ಗೀತಾ ಗಾವಡೆ, ಜ್ಯೋತಿಭಾ ಘಾಡಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply