This is the title of the web page
This is the title of the web page

Please assign a menu to the primary menu location under menu

State

ಕೊಳಗೇರಿ 200 ಮನೆ ಮಂಜೂರಾತಿಗೆ ಶಾಸಕ ಪರಣ್ಣ ಮುನವಳ್ಳಿ ಭೂಮಿಪೂಜೆ


ಗಂಗಾವತಿ .ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಗರದ ವಿವಿಧ ಕೊಳಗೇರಿಗಳಿಗೆ 200 ಮನೆ ಮಂಜೂರಾತಿಗೆ ಶಾಸಕ ಪರಣ್ಣ ಮುನವಳ್ಳಿ ಭೂಮಿಪೂಜೆ,,

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಅವಾಸ್ ವಸತಿ ಯೋಜನೆ ಅಡಿಯಲ್ಲಿ ಗಂಗಾವತಿ ನಗರದ ಕೊಳೆಗೇರಿ ಪ್ರದೇಶಗಳಿಗೆ 20 0 ಮನೆಗಳಿಗೆ ಮಂಜೂರಾತಿ ದೊರಕಿದ್ದು ಶಾಸಕ ಪರಣ್ಣ ಮುನವಳ್ಳಿ ರವಿವಾರದಂದು ಸಿದ್ಧಿ ಕೇರಿಯ ಕೊಳಗೇರಿಯಲ್ಲಿ ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಮಿ ಪೂಜೆಯನ್ನು ನೆರವೇರಿಸಿದರು, ಬಳಿಕ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ ಕರ್ನಾಟಕ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಗಂಗಾವತಿ ನಗರ ವ್ಯಾಪ್ತಿಯ ವಿವಿಧ ಕೊಳಗೇರಿಗಳಿಗೆ ಎರಡುನೂರು ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಟ್ಟು 13 ಕೋಟಿ ರೂಪಾಯಿಗಳನ್ನು ಮಂಜೂರಾತಿ ಗೊಳಿಸಲಾಗಿದು ಈ ಹಿನ್ನೆಲೆಯಲ್ಲಿ ಸಿದ್ಧಿ ಕೇರಿ ವ್ಯಾಪ್ತಿಯ ಕೊಳಗೇರಿಯಲ್ಲಿ ಪ್ರಥಮ ಹಂತವಾಗಿ ಭೂಮಿಪೂಜೆಯನ್ನು ನೆರವೇರಿಸಿ ವಸತಿರಹಿತರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಇದರ ಸದುಪಯೋಗವನ್ನು ಕೊಳಗೇರಿ ನಿವಾಸಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು, ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಜೊತೆಗೆ ಉತ್ತಮವಾದ ವಸತಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಲಹೆ ನೀಡಿದರು,
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ. ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷರಾದ ಚನ್ನಪ್ಪ ಮಳಿಗಿ ನಗರಸಭೆ ಸದಸ್ಯರಾದ ಶರಭೋಜರಾವ್. ಉಮೇಶ ಸಿಂಗನಾಳ.ನೀಲಕಂಠ ಕಟ್ಟಿಮನಿ.ವಾಸುದೇವ ನವಲಿ.ರಮೇಶ ಚೌಡ್ಕಿ. ಪರಶುರಾಮ ಮಡ್ಡೇರ್. ಅಜಯ ಬಿಚ್ಚಾಳಿ.ಡಾ.ಜಿಡಿ. ಸೇರಿದಂತೆ ಇತರರು ಇದ್ದರು


Gadi Kannadiga

Leave a Reply