ಗಂಗಾವತಿ:-ಡಿ 5 ರಂದು ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲಧಾರಿಗಳು ವಿಸರ್ಜನೆ ಸಲುವಾಗಿ 2, ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಕೊಪ್ಪಳ ಜಿಲ್ಲಾಡಳಿತ ಮತ್ತು ಗಂಗಾವತಿ ತಾಲೂಕ ಆಡಳಿತ ಸರ್ವ ರೀತಿ ವ್ಯವಸ್ಥೆ ಮಾಡಲಾಗಿದೆ ಅಂಜನಾದ್ರಿ ಹನುಮ ಮಾಲಾಧಾರಿಗಳ ಸಂಖ್ಯೆ ಹೆಚ್ಚಾಗಿದ್ದು ಸುಮಾರು 2 ಲಕ್ಷ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಲ್ಲರಿಗೂ ಸಕಲ ರೀತಿಯಲ್ಲಿ ಸೌಕರ್ಯ ಒದಗಿಸಬೇಕಿದ್ದು ಅಧಿಕಾರಿಗಳು ಅತ್ಯಂತ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕೆಂದುರು ನೀರು ಆಹಾರ ಆರೋಗ್ಯ ತಪಾಸಣೆ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಬೇಕು ಕಳೆದ ಬಾರಿಯಂತೆ ಈ ಬಾರಿ ನೀರಿನ ವ್ಯವಸ್ಥೆಯಲ್ಲಿ ಕೊರತೆ ಉಂಟಾಗಬಾರದು ಕೆಲವೊಂದಿಷ್ಟು ಮಾಲಧಾರಿಗಳು ಒಂದು ದಿನ ಮುಂಚೆ ಡಿಸೆಂಬರ್ 4ಕ್ಕೆ ನಗರಕ್ಕೆ ಆಗಮಿಸಲಿದ್ದು ಅವರಿಗೆ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ವಸತಿ ಸ್ಥಾನ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು
ಡಿವೈಎಸ್ಪಿ ರುದ್ರೇಶ್ ಉಜ್ಜನ ಕೊಪ್ಪ ಮಾತನಾಡಿ ಅಂಜನಾದ್ರಿ ಮಾಲಧಾರಿಗಳು ನಮ್ಮಲ್ಲಿಗೆ ಬರುವ ಅತಿಥಿಗಳು ಅವರಿಗೆ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸ್ವಯಂಸೇವಕರು ಸೂಕ್ತ ಸತ್ಕಾರ ನೀಡಬೇಕಿದೆ ಆನೆಗುಂದಿ ಉತ್ಸವ ಆಚರಿಸುವ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಸುಮಾರು 10000 ಜನರ ನೇತೃತ್ವದಲ್ಲಿ ನಗರಾದ ಪ್ರಮುಖ ಬೀದಿಗಳಲ್ಲಿ ಶೋಭಾ ಯಾತ್ರೆ ನಡೆಯಲಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದರು
ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕರು ಡಿಸೆಂಬರ್ ಒಂದರ ಒಳಗೆ ಸಿದ್ಧತೆಯ ಎಲ್ಲಾ ಕೆಲಸಗಳು ಪೂರ್ಣಗೊಳ್ಳಬೇಕು ಇಲ್ಲದಿದ್ದಲ್ಲಿ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ನಗರಸಭೆ ಪೌರಯುಕ್ತ ವಿರೂಪಾಕ್ಷ ಮೂರ್ತಿ ಹಿಂದೂ ಪರ ಸಂಘಟನೆಯ ಪ್ರಮುಖರಾದ ಸಂತೋಷ್ ಕೆಲೋಜಿ. ವಿನಾಯ ಪಾಟೀಲ್. ಕಾಡ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ ನಗರಠಾಣ ಪಿಐ ವೆಂಕಟಸ್ವಾಮಿ. ಗ್ರಾಮೀಣಠಾಣಾ ಪಿ ಐ ಮಂಜುನಾಥ್. ಹನುಮಂತಪ್ಪ ನಾಯಕ್. ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ವೆಂಕಟೇಶ್ ಅಮರ ಜ್ಯೋತಿ. ರೈತ ಮುಖಂಡರಾದ ಶರಣಗೌಡ ಕೆಸರಟ್ಟಿ. ಶರಣಗೌಡ ಎರಡೋಣಿ .ರಮೇಶ್ ಚೌಡ್ಕಿ ಕರವೇ ಪಂಪಣ್ಣ ನಾಯಕ್ ಸೇರಿದಂತೆ ಇತರರಿದ್ದರು…
ವರದಿ
ಗಂಗಾವತಿ ಹನುಮೇಶ ಬಟಾರಿ