This is the title of the web page
This is the title of the web page

Please assign a menu to the primary menu location under menu

Local News

ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಶಾಸಕ ಸತೀಶ ಜಾರಕಿಹೊಳಿ


ಹಿಡಕಲ್ ಡ್ಯಾಂ;- ಹುಕ್ಕೇರಿ ತಾಲೂಕಿನ ರುಸ್ತುಂಪೂರ ಗ್ರಾಮದಲ್ಲಿ ಸನ್ ೨೦೨೦-೨೧ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹಾಗೂ ಇಲಾಖೆಯ ಎಸ್.ಡಿ.ಪಿ. ಒಗ್ಗೂಡಿಸುವಿಕೆ ಯೋಜನೆಯಲ್ಲಿ ಮಂಜೂರಾದ ೧೦ ಲಕ್ಷ ರೂ. ಅನುದಾನದಲ್ಲಿ £ರ್ಮಾಣವಾದಅಂಗನವಾಡಿ ಕಟ್ಟಡವನ್ನು ದಿ. ೨೩ ರಂದು ಶಾಸಕ ಸತೀಶ ಜಾರಕಿಹೊಳಿ ಉದ್ಘಾಟಿಸಿದರು.
ಯಮಕನಮರಡಿ ಮತಕ್ಷೇತ್ರ ಬರುವ ಎಲ್ಲಾ ಶಾಲಾಕಾಲೇಜುಗಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು £Ãಡಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಕೊಡಲು ಪ್ರಯತ್ನಿಸಲಾಗುತ್ತದೆ ಗ್ರಾಮಸ್ಥರು ಸರ್ಕಾರ ಕೊಡುವ ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ರುಸ್ತುಂಪೂರ ಗ್ರಾ.ಪಂ. ಪಿಡಿಒ ಸಿ.ಆರ್.ನಂದಗಾಂವಿ ಪ್ರಾಸ್ತಾವಿಕವಾಗಿ ಮಾತನಾಡಿ ಈ ಗ್ರಾಮದಲ್ಲಿ ಕಳೆದ ೩೦ ವರ್ಷಗಳಿಂದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿರಲಿಲ್ಲ ಶಾಸಕ ಸತೀಶ ಜಾರಕಿಹೊಳಿಯವರ ವಿಶೇಷ ಪ್ರಯತ್ನದಿಂದ ಅಂಗನವಾಡಿ ಕಟ್ಟಡ £ರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಮಂಜುನಾಥ ಪಾಟೀಲ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ £ರ್ದೇಶಕ ಈರಣ್ಣಾ ಬಂಜಿರಾಮ ರುಸ್ತುಂಪೂರ ಗ್ರಾ.ಪಂ.ಅಧ್ಯಕ್ಷ ನಾಗಪ್ಪ ಚನ್ನನವರ, ಅಬ್ದುಲಗಣಿ ದರ್ಗಾ, ವಿನೋದ ಡೊಂಗ್ರೆ, ಮಾರುತಿ ಗುಟಗುದ್ದಿ, ಗ್ರಾ.ಪಂ.ಸದಸ್ಯ ಭೀಮಶಿ ಬೋರವಗೋಳ, ಈರಪ್ಪ ಇದರಗುಚ್ಚಿ, ಮಲ್ಲಿಕಾರ್ಜುನ ಪೂಜೇರಿ, ಪರಸಪ್ಪ ಯಲ್ಲಪ್ಪ ಪೂಜೇರಿ, ಭೀಮರಾಯಿ ಲಂಕೆನ್ನವರ, ಹಾಗೂ ಇನ್ನುಳಿದ ಗ್ರಾಮಸ್ಥರು ಡಾ. ವಿನಾಯಕ ಹಜ್ಜೆ, ಎನ್.ಎಸ್. ಮೋಮಿನ, ರಫೀಕ ನಧಾಪ, ಹಾಗೂ ಇನ್ನುಳಿದವರು ಉಪಸ್ಥಿತರಿದ್ದರು.


Gadi Kannadiga

Leave a Reply