ಬಳ್ಳಾರಿ ಜ ೦೯. ಮನೆಯ ಮೇಲಿನ ಬಿಜೆಪಿ ಬಾವುಟ ತೆಗೆಯಲಾರೆ, ಬಿಜೆಪಿ ಬಿಡಲಾರೆ ಎಂದು ನಗರ ಶಾಸಕ ಸೋಮಶೇಖರ್‌ರೆಡ್ಡಿ ತಿಳಿಸಿದರು. ಕ್ಲಾಸಿಕ್ ಪಂಕ್ಷನ್ ಹಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನನ್ನ ಉಸಿರು ಇರೋವರೆಗೂ ಮನೆಯ ಮೇಲಿರೋ ಬಿಜೆಪಿ ಬಾವುಟ ತೆಗೆಯಲಾರೆ ಎಂದು ಪರೋಕ್ಷವಾಗಿ ರೆಡ್ಡಿ ಪಕ್ಷಕ್ಕೆ ಹೋಗಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿ ತನ್ಮೂಲಕ ಕಾರ್ಯಕರ್ತರ ಗೊಂದಲ ನಿವಾರಿಸಿದರು. ಶ್ರೀರಾಮುಲು ನನ್ನ ನಾಯಕ, ಶ್ರೀರಾಮುಲು ಬಿಜೆಪಿ ಪಕ್ಷವನ್ನ ಫಾಲೋ ಮಾಡುತ್ತಿದ್ದಾರೆ. ನಾನು ಶ್ರೀರಾಮುಲು ಅವರನ್ನ ಫಾಲೋ ಮಾಡುತ್ತೇನೆ. ನನ್ನ ರಾಜಕೀಯ ಬೆಳವಣಿಗೆಗೆ ಶ್ರೀರಾಮುಲು ಕಾರಣ. ಅವರೇ ನನ್ನ ನಾಯಕರು ನಾನು ನಗರಸಭೆ ಉಪಾಧ್ಯಕ್ಷನಿಂದ ಶಾಸಕನಾಗುವವರೆಗೆ ಶ್ರೀರಾಮುಲು ಕಾರಣ ಎಂದರು.ಶ್ರೀರಾಮುಲು ಮುಂದೆ ರಾಜಕೀಯವಾಗಿ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ ಅವರ ಬೆಳವಣಿಗೆಯನ್ನ ಎಲ್ಲಾ ಕಾರ್ಯಕರ್ತರು ನಿರೀಕ್ಷಿಸಿದ್ದಾರೆ ಎಂದು ಶ್ರೀರಾಮುಲುರನ್ನ ಹಾಡಿಹೊಗಳಿದರು. ಇದರ ಅರ್ಥ ಜನಾರ್ಧರನರೆಡ್ಡಿ ಪಕ್ಷಕ್ಕೆ ನಾವು ಹೋಗುವುದಿಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.