This is the title of the web page
This is the title of the web page

Please assign a menu to the primary menu location under menu

Local News

ಶಾಲಾ ಮಕ್ಕಳ ಪೌಷ್ಟಿಕ ಆಹಾರದ ಸದ್ಬಳಕೆಯಾಗಲಿ: ಮಕ್ಕಳೊಂದಿಗೆ ಊಟ ಮಾಡಿದ ಶಾಸಕ ವಿಶ್ವಾಸ ವೈದ್ಯ


ಸವದತ್ತಿ: ಸಮೀಪದ ಯಡ್ರಾಂವಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ತಾಲೂಕಾ ಮಟ್ಟದ ೯,೧ ೦ನೇ ತರಗತಿ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಪೌಷ್ಟಿಕ ಆಹಾರ ಅತ್ಯಗತ್ಯ. ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರದ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ಆದರ್ಶ ವಿದ್ಯಾಲಯದಲ್ಲಿನ ಪರಿಸರ, ಶಿಸ್ತು, ಸ್ವಚ್ಚತೆ ಉತ್ತಮ ಶಿಕ್ಷಣ ನೀಡುತ್ತಿರುವದು ತುಂಬಾ ಸಂತೋಷ ತಂದಿದೆ ಎಂದರು.
ನಂತರ ಅವರು ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಿಂದ ಶಾಸಕ ವಿಶ್ವಾಸ ವೈದ್ಯ ಅವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಇಓ ಮೋಹನ ದಂಡಿನ, ಡಾ. ಶ್ರೀಪಾದ ಸಬನಿಸ್, ಮೈತ್ರಾದೇವಿ ವಸ್ತ್ರದ, ಸೋಮಲಿಂಗ ಬೆಳವಡಿ, ಇಂದಿರಾ ಕಬ್ಬಿನ, ಆರ್. ಎಫ್.ಮಾಗಿ, ಅಬ್ದುಲಲತೀಫ್ ಸವದತ್ತಿ ಹಾಗೂ ಪ್ರಮುಖರು ಇದ್ದರು.


Leave a Reply