ಸವದತ್ತಿ : ಮರಣದ ನಂತರ ಕಣ್ಣನ್ನು ಮಣ್ಣು ಮಾಡದೆ ದಾನ ಮಾಡಿದರೆ ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ.ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರ ದಾನ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಇಲ್ಲಿನ ಕೆ.ಎಲ್.ಇ.ಸಂಸ್ಥೆಯ ಎಸ್.ಕೆ.ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆ ಸವದತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಮನುಷ್ಯನ ದಿನ ನಿತ್ಯದ ಚಟುವಟಿಕೆಗಳಿಗೆ ಅತೀ ಮುಖ್ಯ ಅಂಗವಾಗಿರುವ ಕಣ್ಣುಗಳ ರಕ್ಷಣೆಯ ಜೊತೆಗೆ ಪ್ರತಿಯೊಬ್ಬರು ಅಂದರ ಬಾಳಿಗೆ ಬೆಳಕು ನೀಡಲು ನೇತ್ರದಾನಕ್ಕೆ ಹೆಸರು ನೋಂದಾಯಿ ಸಿಕೊಳ್ಳಲು ಮುಂದಾಗಬೇಕು.ನಾನು ಇಲ್ಲದ ಸಮಯದಲ್ಲಿ ನನ್ನ ನೇತ್ರಗಳು ಅಂದರ ಬಾಳಿಗೆ ಬೆಳಕು ನಿಡಬೇಕು ಎಂದರು.
ಶಾಸಕ ವಿಶ್ವಾಸ್ ವೈದ್ಯ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡು ತಮ್ಮ ಒಪ್ಪಿಗೆ ಪತ್ರವನ್ನು ತಾಲೂಕ ಆರೋಗ್ಯಾಧಿಕಾರಿ ಡಾ|| ಶ್ರೀಪಾದ ಸಬನಿಸ ಅವರಿಗೆ ಹಸ್ತಾಂತರಿಸಿದರು.
ವೈದ್ಯ ಮಹ್ಮದ ಸಲೀಮ್ ಕಿತ್ತೂರ ಕಣ್ಣಿನ ಆರೈಕೆ ಕುರಿತು ವಿವರಿಸಿದರು.
ಈ ವೆಳೆ ಪ್ರಾಚಾರ್ಯ ಬಿ.ಕೆ.ಕಠಾರೆ, ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ,ತಾ.ಪ.ಇಒ ಯಶವಂತಕುಮಾರ, ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ,ಡಾ. ಗೀತಾ ಕಾಂಬಳೆ,ಡಾ.ಎಸ್.ಟಿ. ಹಿತ್ತಲಮನಿ, ಡಾ.ಅಶ್ವಿನಿ ಕೆ. ಹೆಚ್, ಮುಖ್ಯವೈದ್ಯಾಧಿಕಾರಿ ಡಾ.ಎಚ್.ಎಂ. ಮಲ್ಲನಗೌಡರ,ಶಿವಾನಂದ ಪಟ್ಟಣಶೆಟ್ಟಿ, ಬಿ.ಎನ್. ಪ್ರಭುನವರ,ಸುನಿಲ ಸುಳ್ಳದ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.