ಬೆಳಗಾವಿ: ಡಿಸೆಂಬರ್ 12 ಕ್ಕೆ ಎಲ್ಲರೂ ಬುತ್ತಿ ಕಟ್ಟಿಕೊಂಡು ಬರಬೇಕು, ಪಂಚಮಸಾಲಿ ಸಮಾಜದ ಅಂತಿಮ ಹೋರಾಟ ಮಾಡೋಣ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಕರೆನೀಡಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಇಂದು ನಡೆದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಮೀಸಲಾತಿ ವಿಳಂಬವಾಗಲು ಒಬ್ಬರಿದ್ದಾರೆ. ನನ್ನ ವಿರುದ್ಧ ಏನೇನೋ ಮಾಡಲು ಯತ್ನಿಸಿದರು ಎಂದು ಪರೋಕ್ಷವಾಗಿ ಯಡಿಯೂರಪ್ಪ, ಬಿ. ವೈ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಅಪ್ಪ-ಮಗ ಏನೇನೋ ಮಾಡುತ್ತಿದ್ದಾರೆ, ನನಗೆ ಏನೂ ಆಗಲ್ಲ. ಅವರ ಬಳಿ ನಿಜವಾದ ಹಾವಿಲ್ಲ, ನನ್ನ ಬುಟ್ಟಿಯಲ್ಲಿ ಹಾವಿದೆ. ಈ ಸಮಾವೇಶ ಇದ್ದಿದ್ದು ಸಮಾಜದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಹೊರತು ನಾವು ಲೀಡರ್ ಆಗಲು ಬಂದಿಲ್ಲ. ನಾನು ಯಾರ ಕಾಲಿಗೂ ಬಿದ್ದಿಲ್ಲ. ನಾನು ವಾಜಪೇಯಿ, ಅಡ್ವಾಣಿ ಅವರಿಗಷ್ಟೇ ನಮಿಸಿದ್ದು. ಇದೀಗ ಎಲ್ಲರೂ ಮೀಸಲಾತಿ ಕೊಡುವಂತೆ ಹೇಳುತ್ತಿದ್ದಾರೆ. ಆರು ತಿಂಗಳಲ್ಲಿ ಚುನಾವಣೆ ಇದೆ. ಅದಕ್ಕೆ ಇವೆಲ್ಲಾ ನಡೆಯುತ್ತಿವೆ ಎಂದು ವಾಗ್ದಾಳಿ ಮಾಡಿದರು.