ಕೊಪ್ಪಳ:-ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಕಾಪೂರ ಹತ್ತಿರ ವಿರುವ ಶ್ರೀ ಅಮರನಾಥೇಶ್ವರ ಮಹದೇವ ಮಠದಲ್ಲಿ ನೂತನವಾಗಿ ನಿರ್ಮಿಸಿದ ಪಂಚಮುಖಿ ಆಂಜನೇಯ ದೇವಸ್ಥಾನದ ಲೋಕಾರ್ಪಣೆಗೆ ದಿನಾಂಕ 22-3-2023 ರಂದು ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್ ರವರು ಆಗಮಿಸುವ ಹಿನ್ನೆಲೆಯಲ್ಲಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ರವರು
ಅಮರನಾಥೇಶ್ವರ ಮಹದೇವ ಮಠಕ್ಕೆ ಭೇಟಿ ನೀಡಿ ಆಶ್ರಮದ ಗುರೂಜೀ ಯವರೊಂದಿಗೆ ಸಮಾಲೋಚನೆ ನಡೆಸಿ ಘನವತ್ತ ರಾಜ್ಯಪಾಲರು ಆಗಮಿಸುವ ಕುರಿತು ಚರ್ಚಿಸಿದರು.ಈ ಸಂದರ್ಭದಲ್ಲಿ ವಿವಿಧ ರಾಜ್ಯದಿಂದ ಆಗಮಿಸಿದ ಸಂತರು ಆಶ್ರಮದ ಕಮಿಟಿಯ ಪದಾಧಿಕಾರಿಗಳು ಆಶ್ರಮದ ಭಕ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.