This is the title of the web page
This is the title of the web page

Please assign a menu to the primary menu location under menu

Local News

ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರಸೂಸುವಲ್ಲಿ ಮಾದರಿ ಪ್ರದರ್ಶನಗಳು ಅತ್ಯಗತ್ಯ


ಬೆಳಗಾವಿ: ಶಾಲೆಗಳಲ್ಲಿ ಪ್ರದರ್ಶನಗೊಳ್ಳುವ ವಿಷಯವಾರು ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಕೌಶಲ್ಯಗಳನ್ನು ಹೊರಸೂಸಿ ಅವರ ಮಾನಸಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗುತ್ತವೆ ಎಂದು ಸಮಾಜವಿಜ್ಞಾನ ಪರಿವೀಕ್ಷಕರಾದ ಎಸ್.ಐ. ಕಳಸಣ್ಣವರ ಹಾಗೂ ಎನ್ .ಎಂ. ಮದನಬಾವಿ ಜಂಟಿಯಾಗಿ ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಕೆ.ಎಲ್.ಇ ಸಂಸ್ಥೆಯ ಜಿ. ಎ. ಪ್ರೌಢಶಾಲೆಯ ಮಹಾತ್ಮ ಗಾಂಧೀಜಿ ಸಂಘ ಹಮ್ಮಿಕೊಂಡಿದ್ದ ಸಮಾಜ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡುತ್ತ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಇಂತಹ ವಸ್ತು ಪ್ರದರ್ಶನಗಳು ಕಾಲಕಾಲಕ್ಕೆ ಆಗಬೇಕು ಅಂದಾಗ ವಿಷಯಗಳ ಆಳ ಜ್ಞಾನವನ್ನು ಅರಿಯಲು ಸಹಾಯಕವಾಗುತ್ತದೆ ಎಂದರು. ಎ.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಜಿ.ಎ. ಪ್ರೌಢಶಾಲೆ, ನೈಸರ್ಗಿಕ ವಿಕೋಪಗಳು, ಭಾರತಕ್ಕೆ ಯುರೋಪಿಯನ್ನರ ಆಗಮನ, ಜಲವಿದ್ಯುತ್ ಉತ್ಪಾದನೆ, ಭಾರತದ ಪ್ರಧಾನಮಂತ್ರಿಗಳು , ಕರ್ನಾಟಕದ ಮುಖ್ಯಮಂತ್ರಿಗಳು, ಮಳೆ£Ãರಿನ ಕೊಯ್ಲು, ಮೈಸೂರಿನ ಒಡೆಯರು, ಆಂಗ್ಲೋ- ಮೈಸೂರು ಯುದ್ಧಗಳು, ಕರ್ನಾಟಕದ ಪ್ರಾಕೃತಿಕ ವಿಭಾಗಗಳು, ಜ್ವಾಲಾಮುಖಿ, ಕರ್ನಾಟಕದ ವಿಧಾನಸೌಧ, ಸೌರಮಂಡಲ ವ್ಯೂಹ, ಪಿರಾಮಿಡ್ , ಬ್ಯಾಂಕ್
ಮುಂತಾದ ಸುಮಾರು ೨೦ ಕ್ಕೂ ಹೆಚ್ಚು ಸಮಾಜ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡವು.
ಸಿ.ಎಂ. ಪಾಗಾದ ಸ್ವಾಗತಿಸಿದರು. ಕೆ. ಆರ್. ಪಟ್ಟಣ £ರೂಪಿಸಿದರು. ರೂಪಾ ಬಳಿಗಾರ, ಎಸ್.ಕೆ. ದೇಸಾಯಿ, ಸಂಜನಾ ಅಷ್ಟಗಿ,ಚೈತ್ರಾ ಜಾವೂರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ £Ãಡಿದ್ದರು.


Gadi Kannadiga

Leave a Reply