ಗದಗ)ಮೇ ೧೭: ನೀರಿನ ಮಿತ ಬಳಕೆ ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಕನಿಷ್ಟ ೧ ಸಸಿಯನ್ನು ನೆಟ್ಟು ಅದನ್ನು ಬೆಳೆಸಿ ಪೋಷಿಸಬೇಕು. ಅದು ನಮಗೆ ಉಚಿತ ಆಮ್ಲಜನಕ ಒದಗಿಸುತ್ತದೆ ಎಂದು ಪರಿಸರ ಅಧಿಕಾರಿ ಶ್ರೀಮತಿ ಶೋಭಾ ಪೋಳ ತಿಳಿಸಿದರು.
ನಗರದ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ಸಂಕನೂರ ಹಾಸ್ಪಿಟಲ್‌ದಲ್ಲಿ ಗದಗ ಜಿಲ್ಲಾಡಳಿತ, ಪ್ರಾದೇಶಿಕ ಕಚೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಗದಗ ಹಾಗೂ ಸಂಕನೂರ ಹಾಸ್ಪಿಟಲ್ ಮತ್ತು ರಿಸರ್ಚ ಇನ್ಸ್ಟಿಟ್ಯೂಸ್ ಗದಗ ಇವರುಗಳ ಸಂಯುಕ್ತ ಅಶ್ರಯದಲ್ಲಿ ಮಂಗಳವಾರದಂದು ಪರಿಸರಕ್ಕೆ ಪೂರಕವಾದ ಜೀವನ ಶೈಲಿಗೆ ಸಾಮೂಹಿಕ ಪ್ರೋತ್ಸಾಹ ಎಂಬ ವಿಷಯದ ಕುರಿತು ಸಂಕನೂರ ಹಾಸ್ಪಿಟಲ್ ಮತ್ತು ರಿಸರ್ಚ ಇನ್ಸಟಿಟ್ಯೂಟ್‌ನ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದ ಅವರು ನೀರಿನ ಮಿತ ಬಳಕೆ, ಇಂಧನ ಉಳಿಕೆ, ಸುಸ್ಥಿತ ಆಹಾರ ಪದ್ಧತಿ ಅಳವಡಿಕೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ , ಆರೋಗ್ಯಯುತ ಜೀವನ ಶೈಲಿ ಅಳವಡಿಕೆ, ಏಕಬಳಕೆ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕುರಿತು ವಿವರವಾದ ಮಾಹಿತಿ ನೀಡಿದರು. ಡಾ.ಪ್ರಕಾಶ ಸಂಕನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಅಧಿಕಾರಿ ವಿನ್ಸಂಟ್ ಪಾಟೀಲ ವಂದಿಸಿದರು.
Gadi Kannadiga > State > ನೀರಿನ ಮಿತ ಬಳಕೆ ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
ನೀರಿನ ಮಿತ ಬಳಕೆ ಹಾಗೂ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
Suresh17/05/2023
posted on
More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಂಗಳೂರು: ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ
31/05/2023