This is the title of the web page
This is the title of the web page

Please assign a menu to the primary menu location under menu

Local News

ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಮುಂಚೂಣಿ ಶಿಕ್ಷಕರ ಪಾತ್ರ : ಮೋಹನ ದಂಡಿನ


ಯಮಕನಮರಡಿ : ಕಲಿಕಾ ಚೇತರಿಕೆಯ ಮುಂದುವರೆದ ಭಾಗ ಕಲಿಕಾ ಹಬ್ಬವಾಗಿದ್ದು, ಮಕ್ಕಳು ಖುಷಿಯಿಂದ ಕಲಿಯಬೇಕು ಮಕ್ಕಳು ವರ್ಗಕೊಣೆ ಹೊರಗೆ ಕಲಿಯುವದರಿಂದ ಇನ್ನೂ ಹೆಚ್ಚು ಖುಷಿಯಿಂದ ಕಲಿಯುತ್ತಾರೆ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಹೇಳಿದರು.
ಅವರು ಶುಕ್ರವಾರ ದಿ. ೦೩ ರಂದು ಹಿಡಕಲ್ ಡ್ಯಾಮಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಡಕಲ್ ಡ್ಯಾಂ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳು ಕಲಿತು ಹಬ್ಬದಲ್ಲಿ ಮಕ್ಕಳಿಂದ ಮಾತನಾಡಲಾಗುತ್ತದೆ. ಯಾವುದೇ ಸ್ಪರ್ದೆಯಲ್ಲಿ ನಮ್ಮ ಹುಕ್ಕೇರಿ ತಾಲೂಕಿನ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರಲು ಇಲ್ಲಿಯ ಕ್ರೀಯಾಶೀಲ ಶಿಕ್ಷಕರೇ ಕಾರಣ ಎಂದು ಹೇಳಿದರು.
ಶಿಕ್ಷಕ ಎಸ್.ಎ. ಸರಿಕರ ಪ್ರಾಸ್ತಾವಿಕವಾಗಿ ಮಾತನಾಡಿ ಎರಡು ವರ್ಷದ ಕೋವಿಡ ಸಂದರ್ಭದಲ್ಲಿ ಕಲಿಯನ್ನು ತುಂಬಲು ಕಲಿಕಾ ಚೇತರಿಕೆ ಮುಂದುವರಿಕೆಯ ಭಾಗವೇ ಕಲಿಕಾ ಹಬ್ಬ ಎಂದು ಹೇಳಿದರು. ಎಮ್.ವಾಯ್. ಮಾಸ್ತಮರಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೊಸಪೇಟ ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಬೂದಿಹಾಳ, ಸದಸ್ಯರಾದ ಸದಾನಂದ ಮಾಳ್ಯಾಗೋಳ, ಇರ್ಷಾದ ಕಿಲ್ಲೆದಾರ, ಮುಖ್ಯ ಶಿಕ್ಷಕರಾದ ಶ್ರೀಮತಿ ಟಿ.ಎಸ್.ತಲ್ಲೂರ, ಬಿ.ಆರ್. ಸರನೋಬತ್, ಸಿ.ಆರ್.ಪಿಗಳಾದ ಅರ್ಚನಾ ಪಾಟೀಲ, ರಾಜಗೋಪಾಲ ಮಿತ್ರನ್ನವರ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷ ಎನ್.ಎಸ್. ದೇವರಮ£, £ರ್ವಾಣೇಶ್ವರ ಮಠದ ಸ್ವಾಮಿಜಿಗಳು ಮತ್ತು ಗಣ್ಯರಾದ ಅಜೀತ ಕಾಂಬಳೆ, ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ. ಶಿಂಗೆ, ಶ್ರೀಮತಿ ಎಸ್.ಎಸ್. ವಾಲಿಕಾರ, ಎಚ್.ಬಿ.ನಾಗಪ್ಪಗೋಳ, ಸಿ.ಆರ್.ಪಿ. ಎಸ.ಎನ್. ಪತ್ತಾರ, ಮುಖ್ಯ ಶಿಕ್ಷಕ ಎನ್.ಎ. ಪಾಟೀಲ, ವಾಯ್ ಎಸ್. ರಾಜಗೋಳಿ, ಎಸ್.ಎ. ತಡಸಲ್ಲ ಸರ್, ಸಂತ ತೇರಜಾ, ಶಾಲೆಯ ಪ್ರಾಶುಂಪಾಲರಾದ ಪಾತೀಮಾ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾ ಉಪಾಧ್ಯಕ್ಷೆ ಉಮಾ ಪಡೆಪ್ಪನವರ, ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ರಾಜು ತಳವಾರ ಕಾರ್ಯಕ್ರಮ £ರೂಪಿಸಿದರು.


Leave a Reply