ಬೆಳಗಾವಿ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರ 57 ನೆಯ ಹುಟ್ಟು ಹಬ್ಬದ ನಿಮಿತ್ತ ಬೈಲಹೊಂಗಲ ನಗರದಲ್ಲಿ ಕರ್ನಾಟಕ ಸರ್ಕಾರದ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ಶ್ರೀ ರಮೇಶ ಪರವಿನಾಯ್ಕರ, ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಅಧ್ಯಕ್ಷರಾದ ಶ್ರೀ ಎನ್.ಆರ್.ಠಕ್ಕಾಯಿ, ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕು ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಕೊಪ್ಪದ, ಶ್ರೀರಾಮ ವಧು-ವರರ ಅನ್ವೇಷಣ ಕೇಂದ್ರದ ರಾಜ್ಯ ಸಂಚಾಲಕರಾದ ಶ್ರೀ ಬಸವರಾಜ ಬಡಿಗೇರ, ಬಸವ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಮಹೇಶ ಕೋಟಗಿ , ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕು ಅಧ್ಯಕ್ಷರಾದ ಡಾ. ಪಕೀರನಾಯ್ಕ ಗಡ್ಡಿಗೌಡರ, ಉಪಾಧ್ಯಕ್ಷರಾದ ಶ್ರೀ ಶ್ರೀಶೈಲ ಶರಣಪ್ಪನವರ, ಪ್ರಧಾನ ಕಾರ್ಯದರ್ಶಿ ಶ್ರೀ ಸಂತೋಷ ಕೊಳವಿ, ಕವಿ ಸಂಶೋಧಕರಾದ ಡಾ.ಮಲ್ಲಿಕಾರ್ಜುನ ಛಬ್ಬಿ, ಶ್ರೀ ಬಸವೇಶ್ವರ ಫೋಟೋ ಹಾಗೂ ಗ್ರಂಥಗಳನ್ನು ಅರ್ಪಿಸಿ ಸನ್ಮಾನಿಸಿ ಶ್ರೀ ಮೋಹನ ಪಾಟೀಲ ಅವರ ಜೀವನ, ಸಾಧನೆ ಮತ್ತು ಬಹುಮುಖ ವ್ಯಕ್ತಿತ್ವ ಕುರಿತು ಮಾತನಾಡಿ ಶುಭ ಕೋರಿದರು.
Gadi Kannadiga > State > ಮೋಹನ ಪಾಟೀಲ ಹುಟ್ಟು ಹಬ್ಬ