ಬೆಳಗಾವಿ: ಫೆಬ್ರವರಿ-೧೫: ನಗರದ ಕಾರಂಜಿ ಮಠದಲ್ಲಿ ಬರುವ ಶನಿವಾರ ೧೮ ರಂದು ಸಾಯಂಕಾಲ ೬ಗಂಟೆಗೆ ೨೬೦ನೇ ಮಾಸಿಕ ಶಿವಾನುಭವ ಹಾಗೂ ಮಹಾಶಿವರಾತ್ರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರಿಂದ ಉಪನ್ಯಾಸ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಗುರುಸಿದ್ಧ ಮಹಾಸ್ವಾಮಿಗಳು ವಹಿಸಲಿದ್ದು, ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವ, ಶ್ರೀ ಶಿವಯೋಗಿ ದೇವರ ಸಮ್ಮುಖದಲ್ಲಿ ಜರುಗಲಿದ್ದು ಅಧ್ಯಕ್ಷತೆಯನ್ನು ಸಂಸದೆ ಶ್ರೀಮತಿ ಮಂಗಳಾ ಅಂಗಡಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಹಾಗೂ ಸಮಾಜ ಸೇವಕ ಗುರುದೇವ ಪಾಟೀಲ ಅವರನ್ನು ಸತ್ಕರಿಸಲಾಗುವುದು. ನಂತರ ರೂಪಾ ಖನಗಾವಿ ಅವರಿಂದ ವಚನ ಗಾಯನ ಜರುಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಮಠದ ಭಕ್ತರು ಪಾಲ್ಗೊಳ್ಳಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Gadi Kannadiga > Local News > ಫೆ. ೧೮ ರಂದು ಮಾಸಿಕ ಶಿವಾನುಭವ ಗೋಷ್ಠಿ