ಕುಷ್ಟಗಿ:- ನಗರದ ಹಳೆ ಪ್ರವಾಸಿ ಮಂದಿರದಲ್ಲಿ
ಆಮ್ ಆದ್ಮಿ ಪಕ್ಷದ ಮುಖಂಡರಾದ ಹೊಳಿಯಪ್ಪ ಕುರಿ ವಕೀಲರು ಹುಲುಗಪ್ಪ ಚೂರಿ ವಕೀಲರು ,ಸುಭಾಸ್ ಕರಿಗಾರ್,ರಜಾಕ್ ಸುಳ್ಳದ ,ಚನ್ನಪ್ಪ ನಾಲಗಾರ ಇವರ ನೇತೃತ್ವದಲ್ಲಿ
ಕುಷ್ಟಗಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು ಹಾಗೂ ವಿವಿಧ ಸಮಾಜದ ಹಿರಿಯರು ,ಯುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು .
ಪಕ್ಷದ ಮುಖಂಡ ಎಚ್ಬಿ ಕುರಿ ಮಾತನಾಡಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಎಎಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನೂ ತಾಲೂಕ ಹಲವಾರು ಕಾರ್ಯಕರ್ತರು ನಮ್ಮಪಕ್ಷಕ್ಕೆ ಬರಲಿದ್ದಾರೆ ಎಂದು ಹುಲಗಪ್ಪ ಚೂರಿ ವಕೀಲರು ಹೇಳಿದರು.
ಪಕ್ಷದ ಮುಂದಿನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ದೃಢ ಸಂಕಲ್ಪ ಮಾಡಿಲಾಯಿತು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ