This is the title of the web page
This is the title of the web page

Please assign a menu to the primary menu location under menu

State

ತಾಯಿಯ  ಹಾಲು ಎಲ್ಲವುದಕ್ಕಿಂತ ಶ್ರೇಷ್ಠ; ಪ್ರಸೂತಿತಜ್ಞೆ ಡಾ.ರಜಿಯಾ ಬೇಗಂ, 


ಸಂಡೂರು:ಅ:0೧:-ತೋರಣಗಲ್ಲು ಗ್ರಾಮದಲ್ಲಿ ಜಿಂದಾಲ್  ಒ.ಪಿ.ಜೆ ಬಿ.ಎಸ್ಸಿ.ನರ್ಸಿಂಗ್ ಕಾಲೇಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ  “ವಿಶ್ವ ಸ್ತನ್ಯ ಪಾನ ಸಪ್ತಾಹ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು,  ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾನಾಡಿದ ಪ್ರಸೂತಿ ತಜ್ಞೆ ಡಾ. ರಜಿಯಾ ಬೇಗಂ ಅವರು, ಶಿಶು ಜನಿಸಿದ ಅರ್ಧ ಗಂಟೆಯೊಳಗೆ ಕೊಡುವ ಎದೆಹಾಲು ಕೊಲೆಸ್ಟ್ರೆಮ್ ಯುಕ್ತವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ , ಶಿಶುವಿಗೆ ಆರು ತಿಂಗಳ ವರೆಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡುವ ಅವಶ್ಯಕತೆ ಇಲ್ಲ, ಎಷ್ಟೇ ಬಿಸಿಲಿರಲಿ ನೀರು ಸಹ ಕೊಡಬೇಡಿ ಯಾವುದೇ ಸಮಯದಲ್ಲಾಗಲಿ ಹತ್ತರಿಂದ ಹದಿಮೂರು ಬಾರಿ ತಾಯಿ ಎದೆ ಹಾಲು ಕೊಡ ಬೇಕು, ಕೆಲವರು ಜೇನು, ಔಡಲ ಎಣ್ಣೆ ಹಾಕುವುದು  ಬಿಡಬೇಕು, ಎದೆ ಹಾಲು ಕೊಡುವುದರಿಂದ ಶಿಶುಗಳಿಗೆ ಜೀರ್ಣಿಸಲು ಸುಲಭವಿದ್ದು,   ಮಲಬದ್ಧತೆ ದಂತಹ ಸಮಸ್ಯೆಗಳನ್ನು ತಡೆಗಟ್ಟತ್ತದೆ,ಆರು ತಿಂಗಳ ನಂತರ ಎರಡು ವರ್ಷಗಳ ವರೆಗೆ ಪೂರಕ ಆಹಾರದೊಂದಿಗೆ ಎದೆಹಾಲು ಕಡ್ಡಾಯವಾಗಿ ಕೊಡಲೇಬೇಕು ಎಂದು ತಿಳಿಸಿದರು,
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಪ್ರತಿ ವರ್ಷವೂ ವಿಶ್ವ ಸ್ತನ್ಯ ಪಾನ ಸಪ್ತಾಹವನ್ನು 120 ದೇಶಗಳು ಆಚರಿಸಿ ಎದೆ ಹಾಲಿನ ಮಹತ್ವ ತಿಳಿಸುವ ಸಲುವಾಗಿ ಆಗಸ್ಟ್ ಒಂದರಿಂದ ಏಳರವರೆಗೆ ತಾಯಂದಿರಿಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು, ಉದ್ಯೋಗಸ್ಥ ಮಹಿಳೆಯರು ಮಕ್ಕಳಿಗೆ ಎದೆ ಹಾಲು ಕೊಡಲು ಸಮಯ ನಿಗದಿ ಪಡಿಸಿಕೊಂಡು ಹಾಲುಕೊಡಬೇಕು,  ಕೃತಕ ಹಾಲು ಕೊಡುವುದರಿಂದ ಮಕ್ಕಳಿಗೆ ಅತಿಸಾರ ಬೇದಿ, ನ್ಯುಮೋನಿಯಾ ದಂತಹ ಸಮಸ್ಯೆಗಳಿಗೆ ತುತ್ತಾಗುತ್ತವೆ, ಶಿಶು ಮರಣಕ್ಕೂ ಕಾರಣವಾಗುತ್ತದೆ, ತಾಯಿ ಎದೆ ಹಾಲು ಕೊಡುವುದರಿಂದ ತಾಯಿ ಮಗುವಿನ ಬಾಂಧವ್ಯ ವೃದ್ಧಿಯಾಗುತ್ತದೆ,‌ ಶಿಶು ಲವಲವಿಕೆಯಿಂದ ಇರುತ್ತದೆ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಂಬಿಕಾ, ಆಶಾ  ಅವರು ಎದೆಹಾಲಿನ ಮಹತ್ವದ ಕುರಿತು, ಗೌಸಿಯಾ ಮತ್ತು ಹಿಮಬಿಂದು ಅವರು  ಸೂಕ್ತ ರೀತಿಯಲ್ಲಿ ಎದೆ ಹಾಲುಣಿಸುವ ಪ್ರಾತ್ಯಕ್ಷಿಕೆ, ಹಾಗೂ ಹಾಲು ಉತ್ಪತ್ತಿಯಾಗುವ  ಆಹಾರ ಧಾನ್ತಗಳು,ಮತ್ತು ಪದಾರ್ಥಗಳ ಕುರಿತು ಮಾಹಿತಿಯನ್ನು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಅಂಬಿಕಾ, ಆಶಾ  ಅವರು ಎದೆಹಾಲಿನ ಮಹತ್ವದ ಕುರಿತು, ಗೌಸಿಯಾ ಮತ್ತು ಹಿಮಬಿಂದು ಅವರು  ಸೂಕ್ತ ರೀತಿಯಲ್ಲಿ ಎದೆ ಹಾಲುಣಿಸುವ ಪ್ರಾತ್ಯಕ್ಷಿಕೆ, ಹಾಗೂ ತಾಯಂದಿರಿಗೆ ಹಾಲು ಉತ್ಪತ್ತಿಯಾಗುವ ಧಾನ್ಯಗಲು ಮತ್ತು ಪಾದಾರ್ಥಗಳ ಕುರಿತು ಹಾಗೂ ಶಿಶುಗಳಿಗೆ  ಹಾಲೂಣಿಸಲು ಎದುರಾಗುವ ಅಡೆತಡೆಗಳ ಕುರಿತು ಪ್ರಾತ್ರಾಭಿನಯದ ಮೂಲಕ ಅಭಿನಯಿಸಿ ತೋರಿಸಿದರು, ಅನುಷಾ ನಿರೂಪಿಸಿದರು,
ಈ ಸಂದರ್ಭದಲ್ಲಿ ಡಾ.ಪ್ರಿಯಾಂಕ, ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿಜಯಲಕ್ಷ್ಮಿ,ಸಂಧ್ಯಾ ಪ್ರಿಯ ದರ್ಶಿನಿ,ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಅಶೋಕ್,ವಿಶ್ವನಾಥ್, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಅಂಗವಾಡಿ ಕಾರ್ಯಕರ್ತೆ ಶಂಕ್ರಮ್ಮ, ಮಲ್ಲಮ್ಮ, ಜಯಪ್ರದ,ಪ್ರತಿಭಾ, ತಿಮ್ಮಕ್ಕ ಆಶಾ ಫೆಸಿಲಿಟೇಟರ್ ಬಸಮ್ಮ, ಆಶಾ ಕಾರ್ಯಕರ್ತೆ ನೀಲಮ್ಮ,ಎರ್ರಮ್ಮ, ಹನುಮಂತಮ್ಮ,ಶಿವಲಿಂಗಮ್ಮ, ಲಕ್ಷ್ಮಿ  ಇತರರು ಭಾಗವಹಿಸಿದ್ದರು

Leave a Reply