ಬೈಲಹೊಂಗಲ ೨೧-ಮಗುವಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ £Ãಡುವಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮೂರು ಸಾವಿರ ಮಠದ ಪ್ರಭು £Ãಲಕಂಠ ಸ್ವಾಮಿಗಳು ಹೇಳಿದರು.
ಪಟ್ಟಣದ ಬೈಲವಾಡ ರಸ್ತೆಯಲ್ಲಿರುವ ಶ್ರೀ ಖಾಸ್ಕತೇಶ್ವರ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜರುಗಿದ ಆಕ್ಸಫರ್ಡ್ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾ£ಧ್ಯ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಹೊಂದಿ ಗುರು ಹಿರಿಯರಿಗೆ ಗೌರವ £Ãಡಬೇಕು ದುರಭ್ಯಾಸಗಳಿಂದ ದೂರವಿದ್ದು ಶಿಕ್ಷಣದ ಕಡೆಗೆ ಗಮನಹರಿಸಿ ಒಳ್ಳೆಯ ಶಿಕ್ಷಣ ಹಾಗೂ ಸಂಸ್ಕಾರ ಹೊಂದಿ ನಾಡಿನ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ನುಡಿದರು.
ಪುರಸಭೆ ಅಧ್ಯಕ್ಷ ಬಸವರಾಜ೫ ಜನ್ಮಟ್ಟಿ ಅವರು ಸಸಿಗೆ £Ãರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಕಡಿಮೆ ಅವಧಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬಿರಾದರವರು ಶಿಕ್ಷಣ ಕ್ರಾಂತಿ ಮಾಡಿ ಹಲವಾರು ಸಂಸ್ಥೆಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ £Ãಡುವ ಕಾರ್ಯವನ್ನು ಪ್ರಶಂಶಿಸಿ ಇಂತಹ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಶಿಕ್ಷಣವಂತರಾಗಿ ಸಮಾಜದಲ್ಲಿ ಒಳ್ಳೆಯ ಕಾರ್ಯ ಮಾಡಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದು ನುಡಿದರು.
ಅತಿಥಿಗಳಾಗಿ ಆಗಮಿಸಿದ್ದ ಅಧ್ಯಕ್ಷ ಡಾ ಅಶೋಕ ದೊಡವಾಡ ವಿಜ್ಞಾನ ಪರಿಷತ್ತಿನ ಮೀನಾಕ್ಷಿ ಕೂಡಸೋಮಣ್ಣವರ ಪತ್ರಕರ್ತ ಮಹಾಂತೇಶ ತುರಮರಿ ಅವರುಗಳು ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ £ಂದ ದೂರ ಬಿಟ್ಟು ಅವರ ವಿದ್ಯಾರ್ಜನೆ ಕಡೆಗೆ ಗಮನಹರಿಸಿ ಉತ್ತಮವಾದ ಶಿಕ್ಷಣ ಸಂಸ್ಕಾರ ಸಂಸ್ಕöÈತಿಯನ್ನು ಕಲಿಸಬೇಕೆಂದು ನುಡಿದರು.
ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಪ್ರಗತಿಗೆ ಪಾಲಕರು ಶಿಕ್ಷಕರು ನಗರದ ಗಣ್ಯರು ಕಾರಣ ಎಂದು ಎಲ್ಲರ ಸಹಕಾರದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ £Ãಡಲು ಸಂಸ್ಥೆ ಮುಂದಾಗಿದೆ ಎಂದು ನುಡಿದರು .
ವಿಜ್ಞಾನ ಶಿಕ್ಷಕ ಅರುಣ ಹೆಬ್ಬಳ್ಳಿ ಬೇವಿನಕೊಪ್ಪ ಶಾಲೆಯ ಮುಖ್ಯ ಶಿಕ್ಷಕ ಬಿ ಎಸ್ ವಾಲಿ ಡಾ ಸಿ ಬಿ ಗಣಾಚಾರಿ ಸಂಸ್ಥೆಯ ಉಪಾಧ್ಯಕ್ಷ ಯೋಗೇಶ ಬಿರಾದರ ಪ್ರಾಚಾರ್ಯ ಸುಹಾಸ ಕಡೆಮ£ £ರ್ಮಲಾ ಪಾಟೀಲ ವೇದಿಕೆ ಮೇಲಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು ಶಿಕ್ಷಕ ಎಸ್ ವಿ ಚಿಕ್ಕೋಡಿ ಸ್ವಾಗತಿಸಿದರು ಗೀತಾಂಜಲಿ ಬಾಗಲಕೋಟ ಮಠ ವರದಿ ವಾಚಿಸಿದರು ಶಿಕ್ಷಕ ಆರ್ ಎಸ್ ಪಾಟೀಲ್ ವಂದಿಸಿದರು ನಂತರ ಮಕ್ಕಳಿಂದ ಮನರಂಜನ ಕಾರ್ಯಕ್ರಮಗಳು ಜರುಗಿದವು.
Gadi Kannadiga > Local News > ಮಗುವಿಗೆ ಉತ್ತಮ ಸಂಸ್ಕಾರ £Ãಡುವಲ್ಲಿ ತಾಯಿಯ ಪಾತ್ರ ಬಹು ಮುಖ್ಯ: ಪ್ರಭು £Ãಲಕಂಠ ಶ್ರೀ
More important news
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಮಹಿಳೆ ನಾಪತ್ತೆ
17/03/2023
ನುಡಿದಂತೆ ನಡೆದ ಶಾಸಕ ಅನಿಲ ಬೆನಕೆ
17/03/2023