This is the title of the web page
This is the title of the web page

Please assign a menu to the primary menu location under menu

State

ಪತ್ರಕರ್ತ ಶರಣಪ್ಪ ಕುಂಬಾರ ನಿಧನಕ್ಕೆ ಸಂಸದರಿಂದ ಸಂತಾಪ


ಕೊಪ್ಪಳ ಜುಲೈ 06 (ಕ.ವಾ.): ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದವರಾಗಿದ್ದ ಪತ್ರಕರ್ತ ಶರಣಪ್ಪ ಕುಂಬಾರ ಅವರ ಅಕಾಲಿಕ ನಿಧನದಿಂದಾಗಿ ಕೊಪ್ಪಳ ಜಿಲ್ಲಾ ಮಾಧ್ಯಮರಂಗಕ್ಕೆ ನಷ್ಟ ಉಂಟಾಗಿದೆ ಎಂದು ಸಂಸದರಾದ‌ ಕರಡಿ ಸಂಗಣ್ಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶರಣಪ್ಪ ಅವರು ಸ್ಥಿತಿವಂತರಲ್ಲದಿದ್ದರೂ ಮಾನವೀಯ ಸಿರಿವಂತ ಗುಣಗಳನ್ನು ಹೊಂದಿದ್ದರು. ಅದು ಅವರ ಕಾರ್ಯವೈಖರಿಯಲ್ಲಿಯೇ ಕಾಣುತ್ತಿತ್ತು. ಅಂತಹ ಪ್ರತಿಭಾನ್ವಿತ ಪತ್ರಕರ್ತ ಅಗಲಿದ್ದಕ್ಕೆ ಕೊಪ್ಪಳ ಜಿಲ್ಲಾ ಮಾಧ್ಯಮ ರಂಗಕ್ಕೆ ಬಹಳಷ್ಟು ನಷ್ಟ ಉಂಟಾಗಿದೆ. ದೇವರು, ಮೃತನ ಕುಟುಂಬ ವರ್ಗದವರಿಗೆ, ಬಂಧು ಬಳಗದವರಿಗೆ, ಪತ್ರಕರ್ತರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಂಸದರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.


Leave a Reply