ಸಂಪಾದಕರ ನಿಯೋಗದಿಂದ ಸಂಸದ ಜಗದೀಶ್ ಶೆಟ್ಟರ್ ಭೇಟಿ

Murugesh Shivapuji
WhatsApp Group Join Now

ಬೆಳಗಾವಿ; ಬೆಳಗಾವಿಯ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘದ ನಿಯೋಗವು ಇಂದು ಬೆಳಗಾವಿಯ ನೂತನ ಸಂಸದ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿತು.

ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ, ಉಪಾಧ್ಯಕ್ಷ ಹೀರೋಜಿ ಮಾವರಕರ, ಪ್ರಧಾನ ಕಾರ್ಯದರ್ಶಿ ಸಂಪತಕುಮಾರ್ ಮುಚಳಂಬಿ, ಹಿರಿಯ ಸಂಪಾದಕ ಎಸ್ ಬಿ ಧಾರವಾಡಕರ್, ಇತರ ಪದಾಧಿಕಾರಿಗಳಾದ ಮನೋಜ್ ಕಾಲಕುಂದ್ರಿಕರ್, ರಾಜೇಂದ್ರ ಪವಾರ್, ಶಿವ ರಾಯಪ್ಪ ಏಳುಕೋಟಿ, ಕುಂತಿನಾಥ ಕಲಮನಿ, ಶ್ರೀನಿವಾಸ್ ಮಾವರ್ಕರ್, ಮತೀನ್ ಧಾರವಾಡಕರ್ ಮತ್ತು ಟಿವಿ ವರದಿಗಾರ ಶಿವಾನಂದ ಚಿಕ್ಕಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು ಈ ಸಂದರ್ಭದಲ್ಲಿ, ನೂತನ ಸಂಸದ ಜಗದೀಶ್ ಶೆಟ್ಟರ್ ಅವರನ್ನು ಸತ್ಕರಿಸಲಾಯಿತು. ಸಂಪಾದಕರ ಸಮಸ್ಯೆಗಳನ್ನು ಆಲಿಸಿದ ಸಂಸದ ಜಗದೀಶ್ ಶೆಟ್ಟರ್ ಅವರು ಮುಂಬರುವ ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಕೇಂದ್ರದ ವಾರ್ತಾ ಸಚಿವರೊಂದಿಗೆ ಈ ಸಂಬಂಧ ಚರ್ಚಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

WhatsApp Group Join Now
Telegram Group Join Now
Share This Article
error: Content is protected !!