This is the title of the web page
This is the title of the web page

Please assign a menu to the primary menu location under menu

State

ಮಾರ್ಚ್-ಏಪ್ರಿಲ್‌ರೊಳಗೆ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ: ಸಂಸದ ರಮೇಶ ಜಿಗಜಿಣಗಿ ವಿಶ್ವಾಸ


ವಿಜಯಪುರ ಡಿ.೦೮ : ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಭರದಿಂದ ಸಾಗಿದ್ದು, ಬರುವ ಮಾರ್ಚ್-ಏಪ್ರಿಲ್ ತಿಂಗಳೊಳಗೆ ಕಾಮಗಾರಿಗಳು ಪೂರ್ಣಗೊಂಡು ವಿಮಾನಗಳು ಹಾರಾಟ ನಡೆಸಲಿವೆ ಎಂದು ಮಾಜಿ ಕೇಂದ್ರ ಸಚಿವರಾದ ಸಂಸದ ರಮೇಶ ಜಿಗಜಿಣಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ವಿಜಯಪುರ ಹೊರವಲಯದ ಬುರಾಣಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ಸರ್ಕಾರ ವಿಮಾನ ನಿಲ್ದಾಣ ಏರ್‌ಬಸ್-೩೨೦ ಮೇಲ್ದರ್ಜೆಗೇರಿಸಿರುವುದರಿಂದ ಕಾಮಗಾರಿಗಳು ವೇಗಪಡೆದುಕೊಂಡಿದ್ದು, ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಬೆಂಗಳೂರಿನ ಐಡೆಕ್ ಸಂಸ್ಥೆಗೆ ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರನ್ನಾಗಿ ನೇಮಿಸಲಾಗಿದೆ. ಕಾಮಗಾರಿಯ ವಿನ್ಯಾಸವನ್ನು ವಿಮಾನ ನಿಲ್ದಾಣ ವಿನ್ಯಾಸಗೊಳಿಸುವಲ್ಲಿ ಪರಿಣಿತರಾದ ಮೆ: ರೈಟ್ಸ ಗುರಗಾಂವ ಇವರಿಗೆ ವಹಿಸಿ ಕೊಡಲಾಗಿದೆ ಎಂದು ತಿಳಿಸಿದ ಅವರು, ವಿಜಯಪುರ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ, ಜಿಲ್ಲೆಯ ಆಮದು-ರಫ್ತು ವ್ಯವಹಾರ, ವ್ಯಾಪಾರ ವಹಿವಾಟು, ಸರಕು-ಸಾಗಾಣಿಕೆ ವ್ಯವಸ್ಥೆ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ವಿಜಯಪುರ ವಿಮಾನ ನಿಲ್ದಾಣವನ್ನು ಎಟಿಆರ್-೭೨ ದಿಂದ ಏರ್‌ಬಸ್ ೩೨೦ ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿ ಸಹ ಭರದಿಂದ ಸಾಗಿದ್ದು, ಒಟ್ಟು ೩೪೭.೯೨ ಕೋಟಿ ರೂ.ಗಳ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲನೇ ಹಂತದ ಕಾಮಗಾರಿಗಾಗಿ ೨೨೨.೯೨ ಕೋಟಿ ರೂ.ಗಳು ಹಾಗೂ ಎರಡನೇ ಹಂತದ ಕಾಮಗಾರಿಗೆ ೧೨೫ ಕೊಟಿ ರೂ.ಗಳನ್ನು ನಿಗದಿಪಡಿಸಲಾಗಿದ್ದು, ಎಟಿಆರ್-೭೨ ವಿಮಾನಗಳ ಹಾರಾಟಕ್ಕಾಗಿ ೯೫ ಕೋಟಿ ರೂ.ಹಾಗೂ ಏರ್‌ಬಸ್-೩೨೦ ವಿಮಾನಗಳ ಹಾರಾಟಕ್ಕಾಗಿ ಮೇಲ್ದರ್ಜೆಗೇರಿಸಿರುವುದರಿಂದ ಹೆಚ್ಚುವರಿಯಾಗಿ ೧೨೭.೯೨ ಕೋಟಿ ರೂ.ಗಳ ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು.
ಮೊದಲನೇ ಹಂತದಲ್ಲಿ ೨೨೨.೯೨ ಕೋಟಿ ರೂ.ಗಳಲ್ಲಿ ರನ್‌ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು ಹಾಗೂ ಇತೆ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಹೇಳಿದರು. ಏರ್‌ಸ್ಟ್ರಿಪ್, ರನ್‌ವೇ, ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಸಿಎಫ್‌ಆರ್ ಬಿಲ್ಡಿಂಗ್ ಇಎಸ್‌ಎಸ್ ಬಿಲ್ಡಿಂಗ್, ಎಟಿಸಿ ಬಿಲ್ಡಿಂಗ್, ಯುಜಿ ಟ್ಯಾಂಕ್, ಓವರ್ ಹೆಡ್ ಟ್ಯಾಂಕ್, ಬೌಂಡ್ರಿ ವಾಲ್ಸ್, ಕಾಮಗಾರಿಗಳು ಪ್ರಗತಿಯಲ್ಲಿದ್ದು, ಅಪ್ರಾನ್, ಐಸೋಲೇಶನ್ ಬೇ, ಅಪ್ರೋಚ್ ರೋಡ, ಇಂಟರ್ನಲ್ ರೋಡ, ಜನರಲ್ & ವಿಐಪಿ ಕಾರ್ ಪಾರ್ಕ್, ವಿಐಪಿ ಮೂವಮೇಟ್ ರೋಡ, ಪಿಟಿಬಿ, ಸಿಎಫ್‌ಆರ್ ಮತ್ತು ಎಸ್‌ಟಿಪಿ ರೋಡ, ಕ್ರಾö್ಯಶ್‌ಗೇಟ್ ರೋಡ, ಫ್ಯೂಲ್ ಫಾಮ್ ಪಾವ್‌ಮೆಂಟ್, ಬಾಕ್ಸ್ ಕಲ್ವರ್ಟ್ ಹಾಗೂ ಪೈಪ್ ಕಲ್ವರ್ಟ್ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಅಭಿಯಂತರ ರಾಜು ಮುಜುಂದಾರ, ಸಹಾಯಕ ಅಭಿಯಂತರ ರೇವಣ್ಣ ಮಸಳಿ, ಗುತ್ತಿಗೆದಾರ ಸಿ.ಬಿ.ಆಲೂರ, ಪ್ಯಾಕೇಜ್-೨ ಪ್ರಾಜೆಕ್ಟ್ ಮ್ಯಾನೇಜರ್ ಸರವಣನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply