ಬೆಳಗಾವಿ; ಆಧುನಿಕ ಯುಗಪುರುಷರೆನಿಸಿಕೊಂಡು ಸಮಾಜ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಹಾನಗಲ್ಲಿನ ಲಿಂಗೈಕ್ಯ ಕುಮಾರಸ್ವಾಮಿಗಳ ಆದರ್ಶವನ್ನು ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗದುಗಿನ ತ ತೋಂಟದಾರ್ಯ ಮಠದ ಜಗದ್ಗುರು ಡಾ ತೋಂಟದ ಸಿದ್ದರಾಮ ಮಹಾ ಸ್ವಾಮೀಜಿಯವರು ಹೇಳಿದರು.
ಅವರಿಂದು ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಚಂದನ್ (IN OX) ಚಿತ್ರಮಂದಿರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಜೀವನಾಧಾರಿತ “ವಿರಾಟಪುರದ ವಿರಾಗಿ” ಕನ್ನಡ ಚಲನಚಿತ್ರದ ಪ್ರೀಮಿಯರ್ ಶೋಗೆ ಚಾಲನೆ ನೀಡಿ ಆಶೀರ್ವಚನ ನೀಡುತ್ತಿದ್ದರು.
12ನೇ ಶತಮಾನದ ಬಸವೇಶ್ವರ ತತ್ವ ಆದರ್ಶಗಳನ್ನು 20ನೇ ಶತಮಾನದಲ್ಲಿ ಪ್ರಚಾರ ಮಾಡಿದ ಮಹಾನ್ ಸಂತರು ಸಮಾಜದ ಸಂಜೀವಿನಿ ಎನಿಸಿಕೊಂಡ ಹಾನಗಲ್ಲ ಕುಮಾರಸ್ವಾಮಿಗಳು ಸಮಾಜವನ್ನು ಒಗ್ಗೂಡಿಸಿದವರು ಎಲ್ಲರಿಗೂ ಆದರ್ಶಪ್ರಾಯವಾದ ಬದುಕನ್ನು ನೀಡಿದವರು ಎಂದು ತೋಂಟದ ಶ್ರೀಗಳು ಬಣ್ಣಿಸಿದರು.
ಹಾನಗಲ್ಲ ಕುಮಾರಸ್ವಾಮಿ ಗಳಿಂದ ಸ್ಥಾಪಿತವಾದ ಬಾಗಲಕೋಟೆ ಶಿವಯೋಗ ಮಂದಿರ ಇಂದು ನಾಡಿನ ವಿರಕ್ತ ಮಠದ ಸರ್ವಶ್ರೇಷ್ಠ ಅಧ್ಯಾತ್ಮ ತಾಣವಾಗಿದೆ , ಅವರು ಅಂದು ಮಾಡಿದ ಸಾಮಾಜಿಕ ಕಾರ್ಯಗಳು ಸಮಾಜದ ಸರ್ವರಿಗೂ ತಿಳಿಯುವಂತಾಗಬೇಕು ಎಂಬ ಸದುದ್ದೇಶದಿಂದ ಗುರುದೇವ ಸೇವಾ ಸಂಸ್ಥೆಯವರು ನಿರ್ಮಿಸಿದ ಈ ಚಲನಚಿತ್ರವನ್ನು ಸಮಾಜದ ಸರ್ವರೂ ವೀಕ್ಷಿಸುವಂಥ ಆಗಬೇಕು ಎಂದು ಅವರು ಹೇಳಿದರು. ನಿಡುಸೋಶಿ ಸಿದ್ಧ ಸಂಸ್ಥಾನ ಮಠದ ಶ್ರೀಮನ್ ನಿರಂಜನ ಜಗದ್ಗುರು ಶ್ರೀ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿಯವರು, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿಯವರು,
ಅಥಣಿ ಮೋಟಗಿ ಮಠದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಅವರು ಮತ್ತು ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಮಠಗಳ ಮಠಾಧೀಶರು ವಿವಿಧ ಪಕ್ಷಗಳ ರಾಜಕೀಯ ನಾಯಕರು ಗಣ್ಯರು ಆಗಮಿಸಿದ್ದರು.
Gadi Kannadiga > State > ಲಿ ಹಾನಗಲ್ ಕುಮಾರಸ್ವಾಮಿಯವರ ತತ್ವಾದರ್ಶ ಪಾಲಿಸಬೇಕು-ಡಾ. ತೋಂಟದ ಸಿದ್ದರಾಮ ಶ್ರೀಗಳು
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023