This is the title of the web page
This is the title of the web page

Please assign a menu to the primary menu location under menu

State

ಆಸ್ಪತ್ರೆಗೆ ಭೇಟಿ ನೀಡಿ ಮಾಮನಿ ಆರೋಗ್ಯ ವಿಚಾರಿಸಿದ ಹುಕ್ಕೇರಿ ಶ್ರೀಗಳು


ಬೆಂಗಳೂರು ; ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರ್ನಾಟಕ ವಿಧಾನಸಭೆಯ ಉಪಸಭಾಪತಿಗgಳಾದ ಆನಂದ ಮಾಮನಿ ಅವರ ಆರೋಗ್ಯವನ್ನು ವಿಚಾರಿಸಲು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ರಾಯಬಾಗದ ಶಾಸಕರು ಆದಿಜಾಂಭವ ನಿಗಮದ ಅಧ್ಯಕ್ಷರಾದ ಶ್ರೀ ದುರ್ಯೋಧನ ಐಹೊಳೆ ಅವರು ಭೇಟಿ ನೀಡಿ ಆನಂದ ಮಾಮನಿ ಅವರ ಆರೋಗ್ಯವನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆನಂದ ಮಾಮನಿ ಅವರು ದೈವಭಕ್ತರು ತಮ್ಮ ತಂದೆಯ ಸ್ಥಾನ ತುಂಬಿ ಕೆಲಸ ಮಾಡುತ್ತಿದ್ದರು. ಅವರ ತಂದೆಯು ಕುಡಾ ಉಪಸಭಾಪತಿ ಆಗಿದ್ದರು ಇವರು ಉಪಸಭಾಪತಿ ಆಗಿ ಜನಪ್ರಿಯತೆ ಗಳಿಸಿದ್ದಾರೆ ಇವರ ಆರೊಗ್ಯ ಚೆನ್ನಾಗಿದೆ ಯಾರು ಭಯಪಡುವ ಅವಶ್ಯಕತೆ ಇಲ್ಲ,ಅವರ ಆರೋಗ್ಯ ಚೆನ್ನಾಗಾಗಲಿ ಎಂದು ಪಾರ್ಥನೆ ಮಾಡಿ ಎಂದು ಜನರಿಗೆ ದೈರ್ಯ ತುಂಬಿದರು.ಇದೆ ಸಂದರ್ಭದಲ್ಲಿ ಶಾಸಕರಾದ ದುರ್ಯೋಧನ ಐಹೊಳೆ ಅವರು ಮಾತನಾಡಿ ಆನಂದ ಮಾಮನಿ ಅವರು ನಮಗೆ ಅತಿ ಆತ್ಮಿಯ ಗೆಳೆಯರು ಅವರು ಬೇಗ ಆಸ್ಪತ್ರೆಯಿಂದ ಕ್ಷೇತ್ರದ ಜನರ ಸೇವೆ ಮಾಡಲು ಮತ್ತೆ ಬೇಗ ಬರುತ್ತಾರೆ ಜನರು ಧೈರ್ಯದಿಂದ ಇರಬೇಕು ಎಂದು ಸವದತ್ತಿ ಕ್ಷೇತ್ರದ ಜನರಿಗೆ ದೈರ್ಯ ತುಂಬಿದರು


Gadi Kannadiga

Leave a Reply