This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಎಂಎಸ್ ಧೋನಿ ಕ್ರಿಕೆಟ್ ಮತ್ತು ಕ್ರೀಡಾ ತರಬೇತಿ ಅಕಾಡೆಮಿ


ಬೆಳಗಾವಿ: ಜೈನ್ ಹೆರಿಟೇಜ್ ವಿದ್ಯಾಸಂಸ್ಥೆಯಲ್ಲಿ ದೋನಿ ಅವರ ಕ್ರಿಕೆಟ್ ಮತ್ತು ಕ್ರೀಡಾ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಮಂಜಿತ ಜೈನ ತಿಳಿಸಿದರು.

ನಗರದ ಖಾಸಗಿ ಹೋಟೆಲ್ನಲ್ಲಿ ಜೈನ್ ಹೆರಿಟೇಜ್ ವಿದ್ಯಾ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜೂನ್ 15 ರಂದು ಎಂ ಎಸ್ ಧೋನಿ ಕ್ರಿಕೆಟ್ ಮತ್ತು ಕ್ರೀಡಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಮಿಹಿರ ದಿವಾಕರ ಈ ಅಕಾಡೆಮಿಯನ್ನು ಉದ್ಘಾಟಿಸಿದರು, ಅದೇರೀತಿ ಮಹೇಂದ್ರ ಸಿಂಗ್ ಧೋನಿ ಅವರ ಮಾರ್ಗದರ್ಶನದಲ್ಲಿ ಅಕಾಡೆಮಿಯ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದರು.

ಶಾಲೆಯ ಅಧ್ಯಕ್ಷರಾದ ಧಾರವಾಡಕರ ಅವರು ಮಾತನಾಡಿ ಶಾಲಾ ಅವಧಿ ಮುಗಿದ ಮೇಲೆ ನೀಡುವ ತರಬೇತಿ ಇದಾಗಿದ್ದು, ಶಾಲೆಯ ಹಾಗೂ ನಗರದ ಎಲ್ಲಾ ಮಕ್ಕಳು ಇದರ ಸದುಪಯೋಗ ಪಡೆದು, ಕರ್ನಾಟಕದಿಂದಲೂ ಕೆಲ ದೋಣಿಗಳು ಉದಯಿಸಲಿ ಎಂದರು.

ಇನ್ನು ಸುದ್ದಿಗೋಷ್ಠಿ ಅಥಿತಿ, ಹಾಗೂ ದೋಣಿಯ ಬಾಲ್ಯಸ್ನೆಹಿತರಾದ ಮೋಹಿರ ದಿವಾಕರ ಮಾತನಾಡಿ, ಬೆಳಗಾವಿಯಲ್ಲಿ ಏನು ಕೊರತೆ ಇದೆಯೋ ಅದನ್ನಾ ಮಾಡುತ್ತಿದ್ದೆವೆ. ಇಲ್ಲಿ ವೃತ್ತಿಪರತೆಯ ಕ್ರಿಕೆಟ್ ಹಾಗೂ ಕ್ರೀಡೆಯನ್ನು ಬೆಳೆಸಲು ದೋನಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ, ನಗರದ ಮಕ್ಕಳ ಪಾಲಕರ ಸಹಕಾರ ಇರಬೇಕು ಬಾಲಕಿಯರಿಗೂ ಕೂಡಾ ಪ್ರತ್ಯೇಕ ವಿಶೇಷ ತರಬೇತಿಯ ಸೌಲಭ್ಯ ಇದೆ ಎಂದರು.


Gadi Kannadiga

Leave a Reply