This is the title of the web page
This is the title of the web page

Please assign a menu to the primary menu location under menu

Local News

ಮೂಡಲಗಿ: ವಿಶ್ವಕರ್ಮ ಜಯಂತಿ ಆಚರಣೆ


ಮೂಡಲಗಿ: ಇಡೀ ಬ್ರಹ್ಮಾಂಡವನ್ನು ಸುಂದರವಾಗಿ ಅಲಂಕರಿಸಿದ ವಿಶ್ವಕರ್ಮನನ್ನು ಈ ಬ್ರಹ್ಮಾಂಡದ ಶ್ರೇಷ್ಠ ಇಂಜಿನಿಯರ್ ಎಂದು ಪರಿಗಣಿಸಲಾಗಿದ್ದು, ಮಹಾಭಾರತದಲ್ಲಿ ಅರಮನೆಗಳು ಸಹ ಇವರ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿವೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಶನಿವಾರದಂದು ಶ್ರೀ ವಿಶ್ವಕರ್ಮ ಜಯಂತಿ ಅಂಗವಾಗಿ ಪಟ್ಟಣದ ಲಕ್ಷ್ಮೀ ನಗರದ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಬ್ರಹ್ಮರ ಮೂಲಕ ಲೋಕಕ್ಕೆ ಪಂಚಶಿಲ್ಪಕಾರ್ಯಗಳ ಮೂಲಕ ಸೃಷ್ಟಿಯಲ್ಲಿ ಸೃಜನಶೀಲತೆ ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಂಡವರು ವಿಶ್ವಕರ್ಮರು ಹಾಗಾಗಿ ವಿಶ್ವಕರ್ಮನಿಗೆ ಇಡೀ ವಿಶ್ವವೇ ಋಣಿಯಯಾಗಿದ್ದು, ಅರಭಾವಿ ಕ್ಷೇತ್ರದ ಎಲ್ಲ ವಿಶ್ವಕರ್ಮದ ಬಂಧುಗಳು ಜಾರಕಿಹೊಳಿ ಕುಟಂಬದ ಮೇಲೆ ಪ್ರೀತಿ ವಿಶ್ವಾಸ ಹೀಗೇ ಇರಲ್ಲಿ ಎಂದು ಹೇಳಿದರು.ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ನಮ್ಮ ಕ್ಷೇತ್ರದಲ್ಲಿ ಯಾವುದೇ ಜಯಂತಿ, ಜಾತ್ರೆ, ದೇವಸ್ಥಾಗಳ ಅಭಿವೃದ್ದಿಗೆ ದಾನದ ರೂಪದಲ್ಲಿ ಹಾಗೂ ಮುಜಿರಾ ಇಲಾಖೆಯಿಂದಾಗಲ್ಲಿ ಸಾಕಷ್ಟು ಸಹಕಾರ ನೀಡುವುದರ ಜೊತೆಗೆ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯವಾಗಿದೆ. ಯಾವುದೇ ದೇವಸ್ಥಾನ ನಿರ್ಮಾಣಗೊಳ್ಳಬೇಕಾದರೇ ಮೊದಲು ಮೂರ್ತಿ ಪ್ರತಿಷ್ಠಾಪನೆಗೊಂಡಾ ಮಾತ್ರ ಅದು ದೇವಸ್ಥಾನವಾಗಿ ಬಂದ ಭಕ್ತರ ದೇಗಲುವಾಗಲೂ ಮೂರ್ತಿ ನಿರ್ಮಾಣ ಮಾಡುವ ವಿಶ್ವಕರ್ಮರನ್ನು ಅಭಿನಂದಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದಲ್ಲಿ ಸಾಧನೆ ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸತ್ಕರಿಸಿ ಗೌರವಿಸಲಾಯಿತು. ವಿಶ್ವಕರ್ಮರ ಜಯಂತಿ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ಜರುಗಿತು.
ಕಾರ್ಯಕ್ರಮದಲ್ಲಿ ಕಾಳಿಕಾ ದೇವಸ್ಥಾನ ಅರ್ಚಕ ದೇವೆಂದ್ರಾಚಾರ್ಯ, ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಕಾಳಿಕಾ ದೇವಸ್ಥಾನದ ಕಮಿಟಿ ಅಧ್ಯಕ್ಷ ಶ್ರೀಕಾಂತ ಪತ್ತಾರ, ಉಪಾಧ್ಯಕ್ಷ ಶಿವರಾಜ ಪತ್ತಾರ, ನಿವೃತ್ತ ಅಭಿಯಂತರ ವಿರುಪಾಕ್ಷಪ್ಪಾ ಪತ್ತಾರ, ಖಾನಟ್ಟಿ ಗ್ರಾಪಂ ಅಧ್ಯಕ್ಷೆ ವಂದನಾ ಸೋನಾರ, ಈಶ್ವರ ಪತ್ತಾರ, ಸುಧಾರ ಪತ್ತಾರ, ಈರಪ್ಪ ಪತ್ತಾರ, ಮೌನೇಶ ಪತ್ತಾರ, ಮಡಿಳಾಪ್ಪ ಬಡಿಗೇರ, ವಿಲಾಶ ಪತ್ತಾರ, ಅನ್ವರ ನದಾಫ್, ಬಸುಝಂಡೇಕುರಬರ ಮತ್ತಿತರು ಇದ್ದರು.
ಚಂದ್ರಶೇಖರ ಪತ್ತಾರ ನಿರೂಪಿಸಿದರು, ವೆಂಕಟೇಶ ಬಡಿಗೇರ ವಂದಿಸಿದರು.


Gadi Kannadiga

Leave a Reply