This is the title of the web page
This is the title of the web page

Please assign a menu to the primary menu location under menu

State

ಮಸ್ಟರಿಂಗ್, ಡಿ-ಮಸ್ಟರಿಂಗ್ ಕಾರ್ಯಕ್ಕೆ ಅಗತ್ಯ ಸಿದ್ಧತೆ: ಎಂ.ಸುಂದರೇಶಬಾಬು


ಕೊಪ್ಪಳ ಮೇ ೦೮ : ಕರ್ನಾಟಕ ವಿಧಾನಸಭಾ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದ್ದಾರೆ.
ಮಸ್ಟರಿಂಗ್ ಮತ್ತ ಡಿ ಮಸ್ಟರಿಂಗ್ ಕಾರ್ಯವು ೬೦ ಕುಷ್ಟಗಿ ಕ್ಷೇತ್ರದ್ದು ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ೬೧ ಕನಕಗಿರಿ ಕ್ಷೇತ್ರದ್ದು ಕನಕಗಿರಿಯ ಕರ್ನಾಟಕ ಪಬ್ಲಿಕ್ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದಲ್ಲಿ, ೬೨- ಗಂಗಾವತಿ ಕ್ಷೇತ್ರದ್ದು ಗಂಗಾವತಿಯ ಲಯನ್ಸ್ ಕ್ಲಬ್ ಕ್ಯಾಂಪಸ್‌ನ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ೬೩ ಯಲಬುರ್ಗಾ ಕ್ಷೇತ್ರದ್ದು ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ್ತು ೬೪ ಕೊಪ್ಪಳ ಕ್ಷೇತ್ರದ್ದು ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ ಕಟ್ಟಡದಲ್ಲಿ ನಡೆಯಲಿದೆ.
ಮೇ ೧೦ರಂದು ನಡೆಯುವ ಮತದಾನ ಕಾರ್ಯದಲ್ಲಿ ೧೫೨೮ ಪಿಆರ್‌ಓ, ೧೫೩೪ ಏಪಿಆರ್‌ಓ ಹಾಗೂ ಪಿಓ ೩೧೬೪ ಸೇರಿ ೬೨೨೬ ಸಿಬ್ಬಂದಿಯನ್ನು ನೇಮಕಾತಿ ಮಾಡಲಾಗಿದೆ. ಅದೇ ರೀತಿ ಮತದಾನ ಕಾರ್ಯಕ್ಕಾಗಿ ನಿಯೋಜಿಸಲಾದ ಸಿಬ್ಬಂದಿಗಳ ಪ್ರಯಾಣಕ್ಕಾಗಿ ೧೮೫ ಬಸ್‌ಗಳು, ೯ ಮಿನಿ ಬಸ್‌ಗಳು, ೬೯ ಕ್ರೂಸರಗಳು ಸೇರಿ ಒಟ್ಟು ೨೬೩ ವಾಹನಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


Leave a Reply