This is the title of the web page
This is the title of the web page

Please assign a menu to the primary menu location under menu

State

ಶಿರಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮ


ಗದಗ ಮೇ ೧೯: ಕೇಂದ್ರ, ವಸತಿ, ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮೀಶನ್ ೨೦ ರ ಯೋಜನೆಯಡಿ ಮೇರಿ ಲೈಫ್ ಮೇರಾ ಸ್ವಚ್ಛ ಶಹರ ಯೋಜನೆಯ ನನ್ನ ಲೈಫ್ ನನ್ನ ಸ್ವಚ್ಛ ನಗರ ಕಾರ್ಯಕ್ರಮದಡಿ ಶಿರಹಟ್ಟಿ ಪಟ್ಟಣ ಪಂಚಾಯತಿ ವತಿಯಿಂದ ಸಾರ್ವಜನಿಕರು ಬಳಸಿದ ತಮ್ಮ ಹಳೆಯ ಮರು ಬಳಸಬಹುದಾಂತಹ ಬಟ್ಟೆಗಳು, ಆಟಿಕೆ ವಸ್ತುಗಳು. ಹಳೆಯ ಪುಸ್ತಕಗಳು, ಜೀಪರ್‌ಗಳು, ಪ್ಲಾಸ್ಟಿಕ್‌ಚೀಲಗಳು, ಎಲೆಕ್ಟ್ರಾನಿಕ್ ವಸ್ತುಗಳಂತಹ ಬಗೆಯ ತ್ಯಾಜ್ಯಗಳನ್ನು ಖeಜuಛಿe ಅಂದರೆ ತ್ಯಾಜ್ಯದ ಪ್ರಮಾಣವನ್ನು ಕಡಿಮೆಗೊಳಿಸುವುದು, ಖeuse ಅಂದರೆ ಮರುಬಳಕೆ ಮತ್ತು ಖeಛಿಥಿಛಿಟe- ಪುನರಬಳಕೆ ಮಾಡುವ ಉದ್ದೇಶದಿಂದ ಆರ್‌ಆರ್‌ಆರ್ ಕೇಂದ್ರವನ್ನು ಶಿರಹಟ್ಟಿ ಪಟ್ಟಣದ ಡಿ.ದೇವರಾಜ ಅರಸು ಭವನ ಹತ್ತಿರ ತೆರೆಯಲಾಗಿದೆ.
ಕೇಂದ್ರವು ಮೇ ೨೦ ರಿಂದ ಪ್ರಾರಂಭವಾಗಿ ಜೂನ್ ೫ ರವರೆಗೆ ಬೆ ೭.೦೦ ರಿಂದ ಮಧ್ಯಾಹ್ನ ೧.೦೦ ಘಂಟೆವರೆಗೆ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಿ ಸೂಕ್ತ ವಿಲೇವಾರಿ ಹಾಗೂ ಮರುಬಳಕೆಗೆ ಆರ್‌ಆರ್‌ಆರ್ ಕೇಂದ್ರಕ್ಕೆ ತಮ್ಮ ಹಳೆಯ ಬಳಸಬಹುದಾಂತಹ ಬಟ್ಟೆಗಳು, ಆಟಿಕೆ ವಸ್ತುಗಳು, ಹಳೆಯ ಪುಸ್ತಕಗಳು, ಪೇಪರ್‌ಗಳು, ಪ್ಲಾಸ್ಟಿಕ್ ಚೀಲ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಿ ಆಕರ್ಷಕ ಉಡುಗೊರೆಗಳನ್ನು ಪಡೆದುಕೊಳ್ಳಲು ಹಾಗೂ ಪಟ್ಟಣ ಸ್ವಚ್ಛವಾಗಿಡಲು ಸಹಕರಿಸಬೇಕೆಂದು ಶಿರಹಟ್ಟಿ ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.


Leave a Reply