ಕುಷ್ಟಗಿ:-ಪಟ್ಟಣದ ವಾರ್ಡ್ ನಂಬರ್- 3 ಗೌರಿ ನಗರದ ಶಾಲೆಯನ್ನು ಕಳೆದ ಎಷ್ಟು ವರ್ಷಗಳಿಂದ ಸ್ವಚ್ಛತೆಯನ್ನು ಮಾಡಲು ಆಗದೆ ಬಹಳ ದುರವಸ್ಥೆಯಲ್ಲಿ ಕಾಣುತ್ತಿತ್ತು.
ಆದರೆ ಹೊಸದಾಗಿ ಬಂದ ಭರಮಪ್ಪನವರು ಶಾಲೆಯ ಒಳಿತಿಗಾಗಿ ಶಾಲೆಯ ಸಿಬ್ಬಂದಿಯೊಂದಿಗೆ ಮಾತನಾಡಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಅದನ್ನು ಅರಿತ ಶಿಕ್ಷಣ ಪ್ರೇಮಿ ರಾಘವೇಂದ್ರ ಕುಲಕರ್ಣಿ ಅವರು ಮಾಡುವ ಕೆಲಸವನ್ನು ನೋಡಿ ಅವರನ್ನು ಮಾತನಾಡಿಸಿದಾಗ ಅವರ ಉತ್ಸಾಹವನ್ನು ಕಂಡು ಬಹಳ ಖುಷಿಯಾಯಿತು.
ಶಾಲೆಯ ಮೇಲಿರುವ ಪ್ರೀತಿ ಮತ್ತು ಉತ್ಸಾಹ ಎಲ್ಲಾ ಶಿಕ್ಷಕರಲ್ಲೂ ಇರಬೇಕು ಎನಿಸಿತು.
ಮುಂದಿನ ದಿನಮಾನಗಳಲ್ಲಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುತ್ತೇನೆ ಎಂದು ಹೇಳಿದ ಬರಮಪ್ಪನವರು ಶಾಲೆಗೆ ಬೇಕಾಗುವ ಕಾಮಗಾರಿಗಳನ್ನು ನಮ್ಮ ಮುಂದೆ ತಿಳಿಸಿದರು
ಮಕ್ಕಳಿಗೆ ಶೌಚಾಲಯ ಶಾಲೆಗೆ ಪೇಂಟಿಂಗ್ ಮತ್ತು ಬಹಳ ಮುಖ್ಯವಾಗಿ ನಮಗೆ ಮಾನ್ಯ ಶಾಸಕರು ಸ್ಮಾರ್ಟ್ ಕ್ಲಾಸ್ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು….
ಅದೇನೇ ಇರಲಿ ಇಂತಹ ಉತ್ಸಾಹಿ ಶಿಕ್ಷಕರು ಪ್ರತಿಯೊಂದು ಶಾಲೆಗೆ ಬೇಕು ಎಂಬುದೇ ನಮ್ಮ ಆಶಯ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ