ಬೆಂಗಳೂರು:- ಕರ್ನಾಟಕ ಭೂಕಬಳಕೆ ನಿಷೇಧದ ವಿಶೇಷ ನ್ಯಾಯಾಲಯದ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಬಸವರಾಜು ಅಂದಾನ ಗೌಡ ಪಾಟೀಲ್ ಅವರ ಅವಧಿಯು ಜೂನ್ 30ಕ್ಕೆ ಮುಗ್ದಿದ್ದರಿಂದ ಇವರ ಸ್ಥಾನಕ್ಕೆ ಕರ್ನಾಟಕ ಭೂಕಬಳಿಕೆ ನಿಷೇಧದ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯರಾಗಿದ್ದ ನಾಗಲಿಂಗನಗೌಡ ಎಸ್ ಪಾಟೀಲ್ ರವರನ್ನು ಸರ್ಕಾರ ನೇಮಕ ಮಾಡಿ ಜೂನ್ 30 ರಿಂದ ಜಾರಿಗೆ ಹಾಗೂ ಮುಂದಿನ ಆದೇಶದ ವರೆಗೆ ಅಧಿಕಾರದಲ್ಲಿರುವಂತೆ ಆದೇಶ ಹೊರಡಿಸಲಾಗಿದೆ.
ನಾಗಲಿಂಗನಗೌಡ ಪಾಟೀಲ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕ ಡಂಕನಕಲ್ ಗ್ರಾಮದವರಾಗಿದ್ದು, ಇವರನ್ನು ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾರ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ, ಮಹಾಂತಯ್ಯ ಎಸ್ ಹೊಸಮಠ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸಂಧರ್ಭದಲ್ಲಿ ಕಚೇರಿಯ ಸಿಬ್ಬಂದಿಗಳು ಪಾಟೀಲ ನಾಗಲಿ0ಗನಗೌಡರಿಗೆ ಅಭಿನಂದನೆಗಳು ನ್ನು ಸಲ್ಲಿಸಿದ್ದಾರೆ
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ