This is the title of the web page
This is the title of the web page

Please assign a menu to the primary menu location under menu

Local News

ಕಾಂಗ್ರೆಸ್ ಸರಕಾರ ರಚಿಸುವುದರ ಬಗ್ಗೆ ಬಿಟ್ಟು ಪಕ್ಷ ಸಂಘಟನೆ ಬಗ್ಗೆ ಚಿಂತಿಸಲಿ: ನಳೀನಕುಮಾರ್ ಕಟೀಲ್


ಬೆಳಗಾವಿ: ಕಾಂಗ್ರೆಸ್ ವಳ ಜಗಳದಿಂದ ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಕುಗ್ಗಿದ್ದು ಅವರು ಸರಕಾರ ರಚನೆ ಮಾಡುವುದಿರಲಿ ಪಕ್ಷ ಸಂಘಟನೆ ಮಾಡುವುದಕ್ಕೂ ಕಷ್ಟಪಡುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ

ವಿಧಾನ ಪರಿಷತ್ ಚುನಾವಣೆಯ ಪ್ರಚಾರದ ಅಂಗವಾಗಿ ಬೆಳಗಾವಿಗೆ ಆಗಮಿಸಿದ ಅವರು ಕಾಂಗ್ರೆಸ್ ಪಕ್ಷವು ಅತಂತ್ರ ಸ್ಥಿತಿಯಲ್ಲಿದೆ ಪಕ್ಷದಲ್ಲಿರುವ ಬಿನ್ನಮತದಿಂದ ಅನೇಕರು ಕಾಂಗ್ರೆಸ್ ತೊರೆದು ಹೊರಹೋಗುತ್ತಿದ್ದಾರೆ. ಚಿಂತನಾ ಸಭೆ ಪ್ರಾರಂಭಿಸಿದಾಗಿನಿಂದ 60 ಜನ ಕಾಂಗ್ರೆಸ್ ಬಿಟ್ಟು ಹೊರ ಬಂದಿದ್ದಾರೆ. ರಾಜ್ಯದಲ್ಲೂ ಇದೇ ರೀತಿ ಪರಿಣಾಮಗಳು ಆಗುತ್ತಿದ್ದು ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವುನ ಬಿನ್ನಾಭಿಪ್ರಾಯ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ ಎಂದರು.

ಈಗಾಗಲೆ ಮುಖ್ಯಮಂತ್ರಿ ಚಂದ್ರು, ಕಾಳಪ್ಪಾ ಅವರು, ಸುದರ್ಶನ ಅವರು ಸೇರಿದಂತೆ ಅನೇಕ ನಾಯಕರು ಕಾಂಗ್ರೆಸ್ ತೊರೆಯಲು ಸಿದ್ದರಾಗಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರು ತಮ್ಮ ಬಲ ಪ್ರದರ್ಶನ ಮಾಡಲು ಮುಂದಾಗಿದ್ದು ದಿನಕ್ಕೊಂದು ಹೇಳಿಕೆ ಕೊಡುವುದರ ಮೂಲಕ ಪಕ್ಷ ಮುಜುಗರಕ್ಕಿಡಾಗುವಂತೆ ಮಾಡಿದ್ದಾರೆ ಎಂದರು.

ಇನ್ನು ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ ನಲ್ಲಿ ಯಾರಿಗೆ ಕೊಡಬೇಕೆಂದು ಚರ್ಚೆಯಾದಾಗ ಹೈಕಮಾಂಡ್ ಮತ್ತು ರಾಜ್ಯದಲ್ಲಿರುವ ನಾಯಕರ ನಡುವೆಯು ಸರಿಯಾದ ಒಪ್ಪಂದವೇ ಆಗಲಿಲ್ಲ ಈ ರೀತಿಯಲ್ಲಿ ಕಾಂಗ್ರೆಸನಲ್ಲಿ ಗೊಂದಲದ ಗೂಡಾಗಿದ್ದು ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ಗೊಂದಲವಂತೂ ಕಾಂಗ್ರೆಸ್ ನಲ್ಲಿ ಮನೆ ಮಾಡಿದ್ದು ಸಿದ್ದರಾಮಯ್ಯ  ಮತ್ತು ಡಿಕೆಶಿ ಹಿಂಬಾಲಕರ ನಡುವೆಯೇ ಗುದ್ದಾಟಗಳು ಶುರುವಾಗಿವೆ. ಇದೆಲ್ಲವನ್ನು ಪರಿಹರಿಸಿಕೊಳ್ಳಲು ವಿಚಾರಮಂಥನ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ  ಅದು ಈಗ ವಿಚಿತ್ರ ವಿಚಾರಮಂಥನ ವಾಗಿದೆ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಭಿನ್ನಮತೀಯರ ಮೂರು ತಂಡಗಳಾಗಿ ರಚನೆಯಾಗಿದೆ ಎಂಬ ಪ್ರಶ್ನೆ ಗೆ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬ ನಡುವಿನ ಪೈಪೋಟಿಗೆ ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಗೆ ವಿಚಾರ ಇಲ್ಲದಿರುವುದು ಗಮನಕ್ಕೆ ಬಂದಿದೆ ಆದರೆ ಅದನ್ನು ಪಾರ್ಟಿ ಆಂತರಿಕ ವಿಷಯದಲ್ಲಿ ಕುಳಿತು ಚರ್ಚೆ ಮಾಡಲಾಗುವುದೆಂದು ಮತ್ತು ನೀವು ತಿಳಿದಿರುವ ಹಾಗೆ ನಮ್ಮ ಪಾರ್ಟಿಯಲ್ಲಿ ಯಾವುದೇ ರೀತಿಯ ಬಿನ್ನಪ ಭಿನ್ನಭಿಪ್ರಾಯ ಭಿನ್ನಮತ ಇಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಶಾಸಕ ಸಂಜಯ ಪಾಟಿಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 


Gadi Kannadiga

Leave a Reply