This is the title of the web page
This is the title of the web page

Please assign a menu to the primary menu location under menu

State

 ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿ ಅನಾವರಣ


                                                                                                                                                                                         ಬೆಂಗಳೂರು: ಕನ್ನಡ ಮಾತಾಡುವವರನ್ನು ಒಂದು ಕಡೆ ಸೇರಿಸಿಕೊಂಡು ನಾಡನ್ನು ಒಂದು ಮಾಡಬೇಕು ಎನ್ನುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಸಾಮಾನ್ಯವಾಗಿ ಬ್ರಿಟೀಷರೊಂದಿಗೆ ಮೈಸೂರು ಅರಸರ ಸಂಬಂಧ ಚೆನ್ನಾಗಿತ್ತು ಎಂದು  ಬಹುತೇಕರು ಅಂದುಕೊಂಡಿದ್ದಾರೆ ವಾಸ್ತವದಲ್ಲಿ ಮೈಸೂರು ಅರಸರಲ್ಲಿ ಹಾಗೂ ಬ್ರಿಟೀಷರ ಮಧ್ಯ ಒಂದು ಸಂಘರ್ಷ ಇದ್ದೆ ಇತ್ತು. ಮುಮ್ಮಡಿ ಕೃಷ್ಣರಾಜ ಒಡೆಯರು ಇಂತಹ ಅನೇಕ ಸಂಘರ್ಷಗಳನ್ನು ಎದುರಿಸಿದರು. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರು ಅದನ್ನು ಚಾಕಚಾಕ್ಯತೆಯಿಂದ ಎದುರಿಸಿ ಕನ್ನಡಿಗರ ಅಸ್ಮಿತೆಯನ್ನು ಕಾಪಾಡಿದರು. ಬ್ರಿಟೀಷರ ಒಡೆದು ಆಳುವ ನೀತಿಯನ್ನು ಸಕಾರಾತ್ಮಕವಾಗಿ ಮೆಟ್ಟಿ ನಿಲ್ಲುವ ದೃಷ್ಟಿಯಿಂದ ಕನ್ನಡಿಗರನ್ನು ಒಂದುಗೂಡಿಸುವ ದೂರದೃಷ್ಟಿಯ  ಪರಿಣಾಮವೇ ಪರಿಷತ್ತನ್ನು ಆರಂಭಿಸಿದರು ಎಂದು ಮೈಸೂರು ಅರಸರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಹೇಳಿದರು.
ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಪರಿಷತ್ತಿನ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಎಲ್ಲ ಭಾರತೀಯರು ಕನ್ನಡಿಗರಲ್ಲದೇ ಇರಬಹುದು, ಆದರೆ ಎಲ್ಲ ಕನ್ನಡಿಗರು ಭಾರತೀಯರೇ ಎನ್ನುವ ಮೂಲಕ ನಾವೆಲ್ಲಾ ದೇಶದ ಏಕತೆಗೆ ಕಾರಣವಾಗಬೇಕಿದೆ. ಇಂತಹ ಮಹತ್ವದ ಕನಸನ್ನು ನಮ್ಮ ಪೂರ್ವೀಕರು ಕಂಡಿದ್ದರು. ಈ ಹಿನ್ನೆಲೆಯಲ್ಲಿ ಅರಮನೆ ಸದಾ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ನಿಂತು ಕನ್ನಡ ಕಟ್ಟುವ ಕೆಲಸದಲ್ಲಿ ಸಹಕಾರ ನೀಡಲಿದೆ ಎಂದು ಮಾಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಭೆಯಲ್ಲಿ ಘೋಷಿಸಿದರು.
   ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್  ಅವರು ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡಿ, ಮೀಸಲಾತಿ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಾಮಾಜಿಕ ಸಮಾನತೆಯನ್ನು ತಂದವರು. ಕೈಗಾರಿಕೆ, ಶಿಕ್ಷಣ, ಬ್ಯಾಕಿಂಗ್ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡಿ ಮೈಸೂರು ಸಂಸ್ಥಾನವನ್ನು ʻಮಾದರಿ ಸಂಸ್ಥಾನʼವನ್ನಾಗಿ ಮಾಡಿದವರು. ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದ ಇವುಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡುವುದರೊಂದಿಗೆ ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ಕನ್ನಡದ ಅಸ್ಮಿತೆಯ ಸಂಸ್ಥೆಯನ್ನು ಹುಟ್ಟುಹಾಕಿದ ದೂರದೃಷ್ಟಿಯ ಮಹಾನಾಯಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಪ್ರಾಸ್ತಾವಿಕ ಮಾತನಾಡುತ್ತಾ ಕೊಂಡಾಡಿದರು.
ಮೈಸೂರಿನ ಮಹಾರಾಜರಾದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ  ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಸ್ವೀಕರಿಸಿ ಅರಮನೆಯ ಸಮಸ್ತ ಸಿಬ್ಬಂದಿಯನ್ನು, ಪರಿಚಿತರನ್ನೂ ಕೂಡ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿರುವುದಾಗಿ ಅಭಿಮಾನಪೂರ್ವಕವಾಗಿ ಹೇಳಿದರು. ಇದನ್ನು ವಿಶೇಷವಾಗಿ ಉಲ್ಲೇಖಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ʻಮಹಾರಾಜರು ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ರಾಯಭಾರಿʼಗಳಾಗಬೇಕು ಎಂದು ಮನವಿ ಮಾಡಿಕೊಂಡರು. ಅದಕ್ಕೆ ಒಪ್ಪಿಕೊಂಡ  ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ರಾಯಭಾರಿಯಾಗುವುದು ತಮಗೆ ಹೆಮ್ಮೆಯ ಸಂಗತಿ ಎಂದು  ಹೇಳಿದರು.
    ನಾಲ್ವಡಿಯವರು ೩೮ ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ದಕ್ಷವಾಗಿ ಆಳ್ವಕೆಯನ್ನು ನಡೆಸಿ  ಸ್ವತಃ ಮಹಾತ್ಮ ಗಾಂಧೀಜಿಯವರಿಂದಲೇ  ʻರಾಜರ್ಷಿʼ ಎನ್ನುವ ಪ್ರಶಂಸೆಗೆ ಪಾತ್ರರಾದವರು. ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ ಪುತ್ಥಳಿಯು ಮೊದಲು ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಡಿಯಲ್ಲಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ನೋಡಲು ಬರುವವರು ಮಾತ್ರ ಮಹಾರಾಜರ ಪುತ್ಥಳಿಯ ದರ್ಶನವನ್ನು ಪಡೆಯಬಹುದಿತ್ತು. ಆದರೆ ಈಗ ಈ ಪುತ್ಥಳಿಯನ್ನು ಪರಿಷತ್ತಿನ ಆವರಣದಲ್ಲಿ ಸ್ಥಾಪನೆ ಮಾಡುವ ಮೂಲಕ ಜನ ಸಾಮಾನ್ಯರೂ ಸಹ ನಾಲ್ವಡಿ ಅವರಿಗೆ ಗೌರವ ಸಲ್ಲಿಸುವ ಮುಕ್ತ ಅವಕಾಶವನ್ನು ಕಲ್ಪಿಸುವ ಮೂಲಕ  ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಂಸ್ಥಾಪಕರನ್ನು ವಿಶೇಷವಾಗಿ ಗೌರವಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಸಭೆಯಲ್ಲಿ ಸ್ಪಷ್ಟಪಡಿಸಿದರು.
 ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ  ಭಾರತದ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾ. ಶಿವರಾಜ ವಿ. ಪಾಟೀಲ* ಅವರು ಮಾತನಾಡಿ, ಪುತ್ಥಳಿಯ ಜೊತೆಗ ಮಹಾಪುರುಷರ ಬದುಕು, ಆದರ್ಶ ನೆನಪಾಗಬೇಕು. ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯ ಮೂಲಕ ಅವರನ್ನೇ ಕಂಡಂತಾಗಬೇಕು. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಿಸಿರುವ ನಾಲ್ವಡಿಯವರ ಪುತ್ಥಳಿಯು ಸೂಕ್ತ ಸ್ಥಳದಲ್ಲಿಯೇ ಸ್ಥಾಪಿಸಲಾಗಿದೆ ಮತ್ತು ಸಮಂಜಸವೂ ಆಗಿದೆ. ನಾಲ್ವಡಿಯವರು ದಾರಿದೀಪವನ್ನು ಸ್ಥಾಪಿಸಿದ ಬಗ್ಗೆ ಎಲ್ಲರೂ ಹೇಳುತ್ತಾರೆ ವಾಸ್ತವವೆಂದರೆ ಅವರು ನಾಡಿನ ಜನತೆಯ ಬದುಕಿಗೇ ದಾರಿದೀಪವಾಗಿದ್ದರು. ನಿಜಕ್ಕೂ ಅವರ ಕಾಲ ʻಸುವರ್ಣ ಯುಗʼವಾಗಿತ್ತು. ೩೮ ವರ್ಷಗಳ ರಾಜಪ್ರಭುತ್ವದ ಹೃದಯದಲ್ಲಿ ಇದ್ದಿದ್ದು ಪ್ರಜಾಪ್ರಭುತ್ವ ಹೀಗಾಗಿಯೇ ಅವರು ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧಗೊಳಿಸಿದ್ದರು ಎಂದು ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಬಣ್ಣಿಸಿದರು.
ಹಿರಿಯ ಬರಹಗಾರ ಮತ್ತು ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ  ಡಾ. ದೊಡ್ಡರಂಗೌಗೌಡರು ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಯನ್ನು ಬಿಂಬಿಸುವ ಕವಿತೆಯನ್ನು ಓದಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಇರುವ ತಾಯಿ ಭುವನೇಶ್ವರಿ ಪುತ್ಥಳಿಗೆ ಎಲ್ಲ ಗಣ್ಯರು ಪುಷ್ಪನಮನ ಸಲ್ಲಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುತ್ಥಳಿಯನ್ನು ಅನಾವರಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗ ಶೆಟ್ಟಿ ಅವರು ಸ್ವಾಗತಿಸಿದರು. ಡಾ. ಪದ್ಮಿನಿ ನಾಗರಾಜು ಅವರು ವಂದಿಸಿದರು. ಗೌರವ ಕೋಶಾಧ್ಯಕ್ಷರಾದ ಡಾ. ಬಿ. ಎಮ್. ಪಟೇಲ್ ಪಾಂಡು* ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply