ವೃದ್ದ ದಂಪತಿಗಳಿಗೆ ಮೋಸ ಮಾಡಿದ್ದ ಖದೀಮರನ್ನ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

Prasanna Kumbar
WhatsApp Group Join Now

ಖಾನಾಪುರ

 

ಖಾನಾಪುರ: ತಾಲೂಕಿನ ಬಿಡಿ ಮೂಲದ ವೃದ್ಧ ದಂಪತಿಗಳ ಆತ್ಮಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳು ಮೊಬೈಲ್ ಫೋನ್ (ಡಿಜಿಟಲ್ ಅರೆಸ್ಟ್) ಮೂಲಕ ವೃದ್ಧ ಮಹಿಳೆಯೊಬ್ಬರಿಗೆ 40 ರಿಂದ 50 ಲಕ್ಷ ರೂ. ವಂಚಿಸಿದ್ದರು. ಆರೋಪಿಗಳ ನಿರಂತರ ಕಿರುಕುಳದಿಂದ ಬೇಸತ್ತು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇಧಿಗ ಆರೋಪಗಳನ್ನು ಬಂದಿಸುವಲ್ಲಿ ಬೆಳಗಾವಿ ಸೈಭರ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು ಆರೋಪಿ ಚಿರಾಗ್ ಜೀವರಾಜಭಾಯ್ ಲಕ್ಕಡ್ (ಸೂರತ್ ಗುಜರಾತ್) ಅವರನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಆತನ ವಿರುದ್ಧ ನಂದಗಡ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66(ಡಿ) ಮತ್ತು ಬಿಎನ್‌ಎಸ್‌ನ ಸೆಕ್ಷನ್ 3(5) ಜೊತೆಗೆ ಸೆಕ್ಷನ್ 108, 308(2), 319(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದರು. ಬೀಡಿಯ ನಿವಾಸಿ ಮತ್ತು ಮಹಾರಾಷ್ಟ್ರ ಸಚಿವಾಲಯದ ನಿವೃತ್ತ ಉದ್ಯೋಗಿ ಡಿಯಾಗೋ ನಜರೆತ್ (83 ವರ್ಷ) ಮತ್ತು ಅವರ ಪತ್ನಿ ಪಾವಿಯಾ ನಜರೆತ್ (79 ವರ್ಷ) ಆತ್ಮಹತ್ಯೆ ಮಾಡಿಕೊಂಡರು. ಈ ಆತ್ಮಹತ್ಯೆಗೆ ಕಾರಣವಾದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ಅಲ್ಲದೆ, ಈ ಹಣವನ್ನು ವರ್ಗಾಯಿಸಲು ಬಳಸಿದ್ದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಆರೋಪಿಯನ್ನ ಬಂಧಿಸುವ ಕಾರ್ಯಾಚರಣೆಯಲ್ಲಿ ವೀರೇಶ್ ದೊಡ್ಮನಿ Cen ಪೊಲೀಸ್ ಠಾಣೆಯ ಡಿವೈಎಸ್ಪಿ
ಸುನಿಲ್ಕುಮಾರ್ ನಂದೀಶ್ವರ PI CEN ಪೊಲೀಸ್ ಠಾಣೆ
ಎಚ್ ಎಲ್ ಧರ್ಮಟ್ಟಿ ಪಿಎಸ್ಐ ಸರ್ಫ್ರಾಜ್ ಬಂಡಿ,ಗಣಪತಿ ಲಮಾಣಿ,ನಾಗಪ್ಪ ಗಡ್ಡಪ್ನವರ್ ಭಾಗವಹಿಸಿದ್ದರು ಬಂಧಿತಆ ರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!