This is the title of the web page
This is the title of the web page

Please assign a menu to the primary menu location under menu

Local News

ತಾಲ್ಲೂಕು ಮಟ್ಟದ ಪ್ರಾಡಶಾಲೆ ವಿದ್ಯಾರ್ಥಿಗಳಿಗೆ ನಂದಿನಿ ಸೈಕ್ಲಿಂಗ್‌ಸ್ಪರ್ಧೆ


ಬೆಳಗಾವಿ: ನಗರದಲ್ಲಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷೆನ್ ಕಾರ್ಯಾಚರಣೆಯಲ್ಲಿದ್ದು, ಸೈಕ್ಲಿಂಗ್ ಪಟುಗಳಿಗೆ ತರಬೇತಿ ನೀಡುವಕಾರ್ಯದಲ್ಲಿ ತೊಡಗಿಕೊಂಡಿದೆ.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ವಿವೇಕ.ವ.ಪಾಟೀಲ ರವರ ತಂದೆಯವರಾದ ವಿ.ಎಲ್.ಪಾಟೀಲ ರವರು ಅಸೋಸಿಯೇಷೆನ್‌ದ ಸಂಸ್ಥಾಪಕರಾಗಿರುತ್ತಾರೆ. ಇದರಲ್ಲಿ ೧೫ ಸೈಕ್ಲಿಸ್ಟ್ ಸದಸ್ಯರಾಗಿರುತ್ತಾರೆ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್‌ಗೆ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಜಿಲ್ಲೆಯ ಸೈಕ್ಲಿಂಗ್ ಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಆಸಕ್ತ ಸೈಕ್ಲಿಸ್ಟ್ಗಳಿಗೆ ತರಬೇತಿ ನೀಡಲು ಅಸೋಸಿಯೇಷೆನ್‌ದವರು ಮುಂದೆ ಬಂದಿರುತ್ತಾರೆ.
ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿಜಿಲ್ಲೆಯ೧೫ ಶೈಕ್ಷಣಿಕತಾಲ್ಲೂಕುಗಳ ಪ್ರೌಡಶಾಲೆಗಳ ೮ನೇ ತರಗತಿಯಿಂದ೧೦ನೇತರಗತಿಯವರೆಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ತರಬೇತಿ ನೀಡಲು ಯೋಜಿಸಿದೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಮತ್ತುಚಿಕ್ಕೋಡಿ ವಿಭಾಗದವರು.
ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷೆನ್ ಬೆಳಗಾವಿ, ಇವರ ಸಹಯೋಗದೊಂದಿಗೆ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಲು ಮುಂದೆ ಬಂದಿರುತ್ತಾರೆ. ತತ್ಸಂಬಂಧ ತಾಲ್ಲೂಕು ಮಟ್ಟದ ಪ್ರೌಡಶಾಲೆಗಳಿಂದ ಒಟ್ಟು ೭೫ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ (೫೦ ಗಂಡು ಮಕ್ಕಳು, ೨೫ ಹೆಣ್ಣುಮಕ್ಕಳು) ಸ್ಪರ್ಧೆ ಏರ್ಪಡಿಸಿ, ಪ್ರತಿತಾಲ್ಲೂಕಿನಲ್ಲಿ ಪ್ರಥಮ, ದ್ವಿತೀಯ ಮತ್ತುತೃತೀಯಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗುವುದು.
ಇದರಿಂದಾಗಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸಹಕಾರಿ ಆಗುವುದು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಇವರುಗಳಿಗೆ ಸ್ಪರ್ಧಿಸಲು ನೆರವಾಗುವಂತೆ ತರಬೇತಿ ನೀಡುವುದಾಗಿ ಅನಿಲ ಪೋತದಾರ ಅಸೋಸಿಯೇಷೆನ್‌ದ ಅಧ್ಯಕ್ಷರು ತಿಳಿಸಿರುತ್ತಾರೆ.
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟವು ಸೈಕ್ಲಿಂಗ್ ಸ್ಪರ್ಧೆಯ ಪ್ರಾಯೋಜಕತ್ವನ್ನು ವಹಿಸಿಕೊಂಡಿರುವುದಾಗಿ ತಿಳಿಸಲು ಹರ್ಷಿಸುತ್ತದೆ.


Gadi Kannadiga

Leave a Reply