This is the title of the web page
This is the title of the web page

Please assign a menu to the primary menu location under menu

Local News

“ನನ್ನ ಲೈಪ್ ನನ್ನ ಸ್ವಚ್ಚ ನಗರ” ಅಭಿಯಾನ ಮೇ.೨೦ ರಿಂದ ಜೂನ್.೫ ರವರೆಗೆ


ಬೆಳಗಾವಿ, ಮೇ.೧೮ : ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ ಮಿಷನ್ ನಗರ ೨.೦ ಯೋಜನೆಯಡಿ ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಣಾಮ ಬೀರುವ “ನನ್ನ ಲೈಪ್ ನನ್ನ ಸ್ವಚ್ಚ ನಗರ” ಅಭಿಯಾನವನ್ನು ಮೇ.೨೦ ೨೦೨೩ ರಿಂದ ಜೂನ್.೫ ೨೦೨೩ ರ ವರೆಗೆ ಹಮ್ಮಿಕೊಳ್ಳಲಾದೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ ೦೬ ಬಗೆಯ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವುದು ಲೈಪ್ ಮಿಷನ್‌ನ ಪ್ರಮುಖ ಉದ್ದೇಶವಾಗಿರುತ್ತದೆ.
ಅದರಂತೆ “ಮೇರಿ ಲೈಪ್ ಮೇರಾ ಸ್ವಚ್ಚ ಶಹರ” ಯೋಜನೆಯಡಿ “ನನ್ನ ಜೀವನ ನನ್ನ ಸ್ವಚ್ಚ ನಗರ” ಕಾರ್ಯಕ್ರಮವನ್ನು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖeಜuಛಿe/ಕಡಿಮೆಗೊಳಿಸುವುದು, ಖeuse/ಮರುಬಳಕೆ & ಖeಛಿಥಿಛಿಟe/ ಮರುಬಳಕೆ ಕುರಿತು ಒಟ್ಟು ೧೨ (ಖಖಖ) ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸದರಿ ಕೇಂದ್ರಗಳನ್ನು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ತೆರೆದಿಡಲಾಗುವುದು.
ಕೇಂದ್ರಗಳ ವಿವರ : ಧನಶ್ರೀ ಗಾರ್ಡನ್ ಭಾಗ್ಯನಗರ- ೭೯೯೬೭೪೨೧೩೨, ಒಣತ್ಯಾಜ್ಯ ಘಟಕ, ಉದ್ಯಮಬಾಗ -೮೦೭೩೬೩೯೮೯೩, ಚಿದಂಬರ್ ನಗರ – ೭೭೯೫೧೨೦೪೪೭, ಪೌರಕಾರ್ಮಿಕರ ವಸತಿ ಗೃಹ ಶಹಾಪೂರ – ೮೪೯೬೦೪೪೧೮೦, ಖಾಸಭಾಗ ನೈಟ್ ಶೆಲ್ಟರ್ – ೮೮೮೪೮೬೮೨೦೮, ಬೀಟ್ ಕಚೇರಿ ಕಪಿಲೇಶ್ವರ – ೮೮೯೨೮೬೫೧೩೩, ಕಾಂದಾ ಮಾರ್ಕೆಟ್ – ೯೫೩೫೩೬೨೧೩೨, ಬಡಕಲ್ ಗಲ್ಲಿ ಸೆಂಟ್ರಲ್ ಲೈಬ್ರರಿ ಹತ್ತಿರ – ೭೭೯೫೭೬೨೮೩೮, ಸ್ಪೋರ್ಟ ಕಾಂಪ್ಲೆಕ್ಸ್, ಸರದಾರ ಗ್ರೌಂಡ್-೯೪೮೦೫೫೬೬೯, ಸದಾಶಿವ ನಗರ – ೯೯೪೫೦೧೫೩೭೧, ಅಶೋಕ ನಗರ ಸ್ಪೋರ್ಟ ಕಾಂಪ್ಲೆಕ್ಸ್ -೯೯೦೦೬೮೦೦೮೭, ಕೋಟೆಕೆರೆ – ೮೯೦೪೮೯೩೩೭೦
ಸದರಿ ಖಖಖ ಕೇಂದ್ರಗಳಲ್ಲಿ ಈ ಕೆಳಗೆ ನಮೂದಿಸಿದ ತ್ಯಾಜ್ಯ ವಸ್ತುಗಳು ನೀಡಿದಲ್ಲಿ ಸಾರ್ವಜನಿಕರಿಗೆ ಪ್ರೋತ್ಸಾಹ ಸಾಮಗ್ರಿಗಳನ್ನು ಹಾಗೂ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು.
ಕೊಡುಗೆಗಳಿಗೆ ನೀಡುವ ಪ್ರೋತ್ಸಾಹಗಳ ವಿವಿರ:
ಆಟಿಕೆಗಳು-ಸ್ಟೇಷನರಿ ವಸ್ತುಗಳು (ಉದಾಹರಣೆಗೆ-ಪೆನ್, ಪೆನ್ಸಿಲ್, ಕ್ರೆಯಾನ್ಸ್)
ಬಟ್ಟೆೆ-ಹಳೆಯ ಜೀನ್ಸ್, ಸಮವಸ್ತ್ರ ಮತ್ತು ಸೀರೆಗಳು (ಬಟ್ಟೆಯನ್ನು ಮರುಬಳಕೆ ಮಾಡುವಂತೆ ಒದಗಿಸಿದರೆ) -ಸಾವಯವ ಗೊಬ್ಬರ (೧ ಕೆ.ಜಿ & ೨ ಕೆÀ.ಜಿ)
ದಿನ ಪತ್ರಿಕೆ/ ಮಾಸಿಕ ಪತ್ರಿಕೆ-ಲೇಖನ ಸಾಮಗ್ರಿಗಳು (ಉದಾಹರಣೆ- ಪೆನ್, ಹಳೆಯ ಪುಸ್ತಕಗಳು)
ಪ್ಲಾಸ್ಟಿಕ್ ಕ್ಯಾರಿ ಬ್ಯಾಗಗಳು- ಪ್ರತಿ ೨೫೦ ಗ್ರಾಂ ಪ್ಲಾಸ್ಟಿಕ್ ಚೀಲಗಳಿಗೆ ೧ ಕೆ.ಜಿ ಸಾಮರ್ಥ್ಯದ ಬಟ್ಟೆಯ ಚೀಲ
ಎಲೆಕ್ಟ್ರಾನಿಕ್ ವಸ್ತುಗಳು – ಡಿಜಿಟಲ್ ಪ್ರಮಾಣ ಪತ್ರ
ಸಾರ್ವಜನಿಕರು ಮೇ-೨೦ ರಿಂದ ಜೂನ್-೦೫ ರ ವರೆಗೆ ಜರಗುವ “ನನ್ನ ಜೀವನ ನನ್ನ ಸ್ವಚ್ಚ ನಗರ” ಕಾರ್ಯಕ್ರಮದಡಿ ೦೬ ವಿವಿಧ ಬಗೆಯ ಮರುಬಳಕೆ ವಸ್ತುಗಳನ್ನು ಮೇಲ್ಕಾಣಿಸಿದ (ಖಖಖ) ಕೇಂದ್ರಗಳಿಗೆ ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಲು ಮಹಾನಗರ ಪಾಲಿಕೆ ಬೆಳಗಾವಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply