This is the title of the web page
This is the title of the web page

Please assign a menu to the primary menu location under menu

State

ನಾರಿ ಶಕ್ತಿಯು ದೇಶದ ಪ್ರತೀಕ: ರಾಜ್ಯಪಾಲ ಗೆಹ್ಲೋಟ್


ವಿಜಯಪುರ: ಮಹಿಳಾ ಶಿಕ್ಷಣವು ಸಮಾಜದ ಆಧಾರವಾಗಿದ್ದು ನಾರಿ ಶಕ್ತಿಯು ನಮ್ಮ ದೇಶದ ಪ್ರತೀಕ ಎಂದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಮಹಿಳಾ ವಿವಿಯಲ್ಲಿ ನಡೆದ ೧೩ ಮತ್ತು ೧೪ ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಮಹಿಳಾ ಸಶಕ್ತೀಕರಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ, ಇದನ್ನು ಎಲ್ಲಾ ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶ್ರೇಷ್ಠ ಭಾರತ, ನಿರ್ಭರ ಭಾರತ ಮಾಡಲು ರಾಷ್ಟ್ರೀಯ ಶಿಕ್ಷಣ ನೀತಿ ಪ್ರಧಾನ ಕಾರ್ಯ ನಿರ್ವನಿರ್ವಹಿಸುತ್ತಿದ್ದು, ಮಹಿಳೆಯರು ಅದರ ಸದುಪಯೋಗ ಪಡೆದುಕೊಂಡು ಎಲ್ಲ ರಂಗದಲ್ಲೂ ಮಹಿಳೆ ಕೆಲಸ ಮಾಡಬೇಕು ಎಂದು ಹೇಳಿದರು. ಚಿನ್ನದ ಪದಕ ಪಡೆದ ಎಲ್ಲ ಮಹಿಳೆಯರು ರಾಷ್ಟ್ರಕ್ಕೆ ಯೋಗದಾನ ಕೊಡುವುದರ ಜೊತೆಗೆ ಪ್ರೇರಣೆ ನೀಡಬೇಕು. ಈ ವಿಶ್ವವಿದ್ಯಾನಿಲಯದಿಂದ ಉತ್ತಮ ಮಟ್ಟದ ಶಿಕ್ಷಣ ತೆಗೆದುಕೊಂಡು ತಮ್ಮ ಜೀವನದಲ್ಲಿ ಮುಂದೆ ಹೋಗಲು ಹಾಗೂ ಸಬಲೀಕರಣ ಹೊಂದಲು ಈ ವಿಶ್ವವಿದ್ಯಾನಿಲಯ ಸಹಾಯಕವಾಗಿದೆ. ಮಹಿಳಾ ವಿಶ್ವವಿದ್ಯಾನಿಲಯವು ರಾಷ್ಟ್ರಕ್ಕೆ ಆದರ್ಶ ವಿಶ್ವವಿದ್ಯಾನಿಲವಾಗಬೇಕು ಎಂದು ತಿಳಿಸಿದರು.


Gadi Kannadiga

Leave a Reply