This is the title of the web page
This is the title of the web page

Please assign a menu to the primary menu location under menu

National

ಮಾರ್ಚ್ 4 ಮತ್ತು 5 ರಂದು ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಲಿಂಗಾಯತ ಮಹಾದಿವೇಶನ


ಬೆಳಗಾವಿ : ಮಾರ್ಚ್ ತಿಂಗಳ ದಿನಾಂಕ 4 ಮತ್ತು 5 ರಂದು ಬಸವಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾದಿವೇಶನ ನಡೆಸಲಾಗುತ್ತಿದೆ ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರಿಂದು 12 ನೇ ಶತಮಾನದಲ್ಲಿ ಬಸವಣ್ಣನವರಿಂದ ಅವೈದಿಕ ಲಿಂಗಾಯಿತ ಧರ್ಮ ಸ್ಥಾಪಿತವಾದದ್ದು ಬಸವಕಲ್ಯಾಣದಲ್ಲಿ, ಅನುಭವ ಮಂಟಪ ಸ್ಥಾಪನೆಯಾದದ್ದು ಕೂಡ ಬಸವಕಲ್ಯಾಣದಲ್ಲಿಯೇ ಹೀಗಾಗಿ ಬಸವಕಲ್ಯಾಣವು ಲಿಂಗಾಯತರಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ ಆ ಕಾರಣಕ್ಕಾಗಿ ಪ್ರಪ್ರಥಮ ರಾಷ್ಟ್ರೀಯ ಲಿಂಗಾಯಿತ ಮಹಾ ಅಧಿವೇಶನವನ್ನು ಬಸವಕಲ್ಯಾಣದಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ ಲಿಂಗಾಯಿತರ ಸಂಘಟನೆಗಳಾದ ರಾಷ್ಟ್ರೀಯ ಬಸವದಳ ,ಲಿಂಗಾಯತ ಧರ್ಮ ಮಹಾಸಭಾ , ಬಸವ ಸಮಿತಿ ,ಶರಣ ಸಾಹಿತ್ಯ ಪರಿಷತ್ತು ,ಲಿಂಗಾಯತ ಮಠಾಧೀಶರ ಒಕ್ಕೂಟ, ಬಸವೇಶ್ವರ ಪಂಚ ಕಮಿಟಿ ಬಸವಕಲ್ಯಾಣ ಹಾಗೂ ಇನ್ನೂ ಅನೇಕ ಸಂಘಟನೆಗಳ ಸಹಯೋಗದಲ್ಲಿ ಈ ರಾಷ್ಟ್ರೀಯ ಮಹಾ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದೆ ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ ತಮಿಳುನಾಡು ಅಲ್ಲದೆ ವಿದೇಶಗಳಿಂದ ಸಹ ಲಕ್ಷಾಂತರ ಲಿಂಗಾಯಿತ ಪ್ರತಿನಿಧಿಗಳು ಈ ಮಹಾ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಈ ಮಹಾದಿವೇಶನದ ವೇದಿಕೆಯು ಸಂಪೂರ್ಣವಾಗಿ ರಾಜಕೀಯೇತರ ವೇದಿಕೆಯಾಗಿದ್ದು ವೇದಿಕೆಯ ಮೇಲೆ ಯಾವುದೇ ರಾಜಕೀಯ ಪಕ್ಷದ ನಾಯಕರಿಗೆ ಸ್ಥಾನ ಇರುವುದಿಲ್ಲ ಎಂದು ಹೇಳಿದ ಅವರು ಈ ಮಹಾ ಅಧಿವೇಶನದಿಂದ ರಾಜಕೀಯವನ್ನು ಸಂಪೂರ್ಣವಾಗಿ ದೂರ ಇಡಲಾಗಿದೆ, ದಿನಾಂಕ 4 ರಂದು ಬಸವಕಲ್ಯಾಣದಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು ಮಹಾ ಅಧಿವೇಶನದ ಸರ್ವಾಧ್ಯಕ್ಷರನ್ನಾಗಿ ನಾಡೋಜ ಡಾ ಗೊ.ರು. ಚೆನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು ನಾಡಿನ ಎರಡು ನೂರಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಎರಡೂ ದಿನಗಳ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮಹಾ ಅಧಿವೇಶನಕ್ಕೆ ಆಗಮಿಸಲಿರುವ ಲಕ್ಷಾಂತರ ಪ್ರತಿನಿಧಿಗಳಿಗೆ ಊಟೋಪಚಾರ ಮತ್ತು ವಸತಿ ವ್ಯವಸ್ಥೆಯನ್ನು ಜಾಗತಿಕ ಲಿಂಗಾಯತ ಮಹಾಸಭೆಯ ಕೇಂದ್ರ ಕಚೇರಿಯಿಂದ ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದೆ, ಎರಡು ದಿನಗಳ ಮಹಾ ಅಧಿವೇಶನದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿದ್ದು ಅವುಗಳಲ್ಲಿ ಮೀಸಲಾತಿ ಮತ್ತು ಲಿಂಗಾಯತರು, ಸ್ವತಂತ್ರ ಧರ್ಮದ ಹೋರಾಟದಲ್ಲಿ ಲಿಂಗಾಯತರು, ಜನಗಣತಿ ಮತ್ತು ಲಿಂಗಾಯಿತರು, ಲಿಂಗಾಯಿತರನ್ನು ಸಂಘಟಿಸುವಲ್ಲಿ ಮತ್ತು ಲಿಂಗಾಯಿತ ನಿಜಾಚರಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರ, ಸ್ಥಳೀಯ ಲಿಂಗಾಯಿತ ಮಠಗಳ ಮಾರ್ಗದರ್ಶನದಲ್ಲಿ ಲಿಂಗಾಯಿತ ಸಮಾಜದ ವಿವಿಧ ಪಂಗಡಗಳನ್ನು ಒಂದುಗೂಡಿಸುವಲ್ಲಿ ಲಿಂಗಾಯತ ಮಹಿಳೆಯರ ಪಾತ್ರ , ಲಿಂಗಾಯತ ಮಹಿಳೆಯರನ್ನು ಒಂದುಗೂಡಿಸಿ ಲಿಂಗಾಯತ ಸಮಾಜವನ್ನು ಸಂಘಟಿಸುವ ಮಹಿಳೆಯರ ಪಾತ್ರ ವೈದಿಕದತ್ತ ವಾಲುತ್ತಿರುವ ಲಿಂಗಾಯತರಿಗೆ ನಿಜಾಚರಣೆಗಳನ್ನು ಜಾರಿಗೊಳಿಸುವಲ್ಲಿ ಲಿಂಗಾಯತ ಮಹಿಳೆಯರ ಪಾತ್ರ, ಲಿಂಗಾಯತ ಸಮಾಜದ ಸಂಘಟನೆ ವಿವಿಧ ಪಂಗಡಗಳು ಏಕೀಕರಣ ಹಾಗೂ ಲಿಂಗಾಯತ ನಿಜಾಚರಣೆಗಳ ಪ್ರಚಾರದಲ್ಲಿ ಯುವಕ ಯುವತಿಯರ ಪಾತ್ರ, ನಗರ ಗ್ರಾಮ ತಾಲೂಕು ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಯುವ ಘಟಕಗಳನ್ನು ಸಂಘಟಿಸಲು ವಿವಿಧ ಮಾರ್ಗಗಳು ಮತ್ತು ಕ್ರಮಗಳು ಯುವಕರ ತರಬೇತಿಗಾಗಿ ವಿವಿಧ ಮಟ್ಟದಲ್ಲಿ ಶರಣ ತತ್ವ ಸಿದ್ಧಾಂತ ಮತ್ತು ಮಹತ್ವದ ಬಗ್ಗೆ ತಿಳುವಳಿಕೆ ನೀಡಲು ಸರಳ ಪಠ್ಯಕ್ರಮ ಮತ್ತು ಸಣ್ಣ ಸಣ್ಣ ಸಾಮಗ್ರಿ ತಯಾರಿಕೆ, ನೂತನ ಅನುಭವ ಮಂಟಪದ ವಿವರಗಳು , ಅನುಭವ ಮಂಟಪ ಮತ್ತು ಕಾರ್ಯ ಯೋಜನೆಗಳು, ಲಿಂಗಾಯಿತ ನಿಜಾಚರಣೆಗಳನ್ನು ಜಾರಿಗೆ ತರುವಲ್ಲಿ ಯುವಕರ ಪಾತ್ರ ಹೀಗೆ ಹಲವು ವಿಷಯಗಳ ಕುರಿತು ವಿಷಯ ಮಂಡನೆ ಚರ್ಚೆ ನಡೆಯಲಿವೆ ಎಂದವರು ವಿವರಿಸಿದರು.
ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಲೋಕಸಭೆಯಲ್ಲಿ ಪ್ರತಿಪಾದಿಸಿದ ಮಹಾರಾಷ್ಟ್ರದ ಸಂಸದರಾದ ಧೈರ್ಯಶೀಲ ಮಾನೆ , ಓಂ ಪ್ರಕಾಶ್ ರಾಜೆ ನಿಂಬಾಳ್ಕರ್, ಮತ್ತು ಮಾಜಿ ಸಂಸದ ರಾಜು ಶೆಟ್ಟಿ ಇವರುಗಳಲ್ಲದೆ ಹಲವರನ್ನು ಅಧಿವೇಶನದಲ್ಲಿ ಸತ್ಕರಿಸಲಾಗುವುದು ಎಂದು ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ , ಹಿರಿಯ ಉಪಾಧ್ಯಕ್ಷ ಎ.ವೈ. ಬೆಂಡಿಗೇರಿ , ನಗರ ಘಟಕದ ಅಧ್ಯಕ್ಷ ಎಸ್. ಜಿ .ಸಿದ್ನಾಳ, ಸಿ.ಎಂ. ಬೂದಿಹಾಳ್ ಮತ್ತು ಶ್ರೀಮತಿ ಶೋಭಾ ಶಿವಳ್ಳಿ ಉಪಸ್ಥಿತರಿದ್ದರು.


Leave a Reply