This is the title of the web page
This is the title of the web page

Please assign a menu to the primary menu location under menu

State

ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆ: ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವರದಿ ಪರಿಶೀಲಿಸಿದ ಮೌಲ್ಯ ಮಾಪನ ತಂಡ


ಬೆಳಗಾವಿ, ಮಾ.೨೭: ಬೆಳಗಾವಿ ಜಿಲ್ಲೆಯಲ್ಲಿ ಪೂರ್ಣಗೊಂಡಿರುವ ರಾಷ್ಟ್ರೀಯ ಮಲೇರಿಯಾ ನಿರ್ಮೂಲನೆಯ ಮೊದಲ ಹಂತದ ಯೋಜನೆಯ ವರದಿಯನ್ನು ಮಾ. ೨೩ .೨೦೨೩ ರಿಂದ ಮಾ ೨೪ ೨೦೨೩ ರ ವರೆಗೆ ರಾಜ್ಯ ಮೌಲ್ಯ ಮಾಪನತಂಡದಿಂದ ಪರಿಶೀಲನೆ ನಡೆಸಲಾಯಿತು.
ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮದಡಿ ೨೦೨೫ ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯ ಹಾಗೂ ೨೦೩೦ ರ ವೇಳೆಗೆ ಮಲೇರಿಯಾ ಮುಕ್ತ ಭಾರತ ಮಾಡುವ ಉದ್ದೇಶದಿಂದ ೨೦೧೬ ರಿಂದ ೨೦೨೨ ರ ವರೆಗೆ ರಾಜ್ಯ ಮಲೇರಿಯಾ ನಿವಾರಣಾ ಚೌಕಟ್ಟು ಯೋಜನೆಯನ್ನು ಪ್ರಾರಂಭಿಸಲಾಗಿದೆ.
೩ ಜನರ ಪ್ರಾಂತಿಯ ತಂಡದ ನೇತೃತ್ವವನ್ನು ಖeಣiಡಿeಜ Seಟಿioಡಿ ಖegioಟಿಚಿಟ ಆiಡಿeಛಿಣoಡಿs ಖಔಊಈW ಉಔI ಡಾ. ರವಿಕುಮಾರ ವಹಿಸಿದ್ದರು. ತಂಡದಲ್ಲಿ Sಡಿ ಛಿoಟಿsuಟಣಚಿಟಿಣ ಖಔಊಈW ಉಔI ಡಾ. ಕುಮಾರ ಹಾಗೂ ಅoಟಿsuಟಣಚಿಟಿಣ ಇಟಿಣomoಟogಥಿ ಓಗಿಃಆಅP ಉಔI ಗಿರೀಶ ಭಾಗವಹಿಸಿದ್ದರು.
ತಂಡ ಮೊದಲು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ಬೆಳಗಾವಿ ನಿಯಂತ್ರಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಜಿಲ್ಲಾರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ.ಎಮ್.ಎಸ್.ಪಲ್ಲೇದ ಅವರು ರಾಷ್ಟ್ರೀಯ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮದ ಬಗ್ಗೆ ಜಿಲ್ಲೆಯ ವರದಿಯನ್ನು ಪಡೆದುಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಚೌಗುಲೇವಾಡಿ, ಸಮುದಾಯ ಆರೋಗ್ಯ ಕೇಂದ್ರ ಹಿರೇಬಾಗೇವಾಡಿ ಹಾಗೂ ಕಿತ್ತೂರ, ಪ್ರಾ.ಆ.ಕೇಂ. ಎಂ.ಕೆ. ಹುಬ್ಬಳ್ಳಿ, ಹಲಸಿ, ಕಣಕುಂಬಿ ಮತ್ತು ಖಾನಾಪೂರಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಜಿಲ್ಲೆಯ ಮಾರ್ಗಸೂಚಿಯಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಿ ಎಲ್ಲ ದಾಖಲೆಗಳನ್ನು ನಿರ್ವಹಿಸಿರುವುದು ಕಂಡು ಬಂದಿದ್ದರಿಂದ ಈ ಕಾರ್ಯಕ್ಕೆ ಡಾ. ಎಮ್.ಎಸ್.ಪಲ್ಲೇದ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ. ಎಮ್.ಎಸ್.ಪಲ್ಲೇದ ಅವರು ಜಿಲ್ಲಾ ಹಾಗೂ ಮೆಲ್ವಿಚಾರಕರಿಗೆ ಮತ್ತು ಜಿಲ್ಲೆ ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.


Leave a Reply