ಗದಗ : ಶೇ. ೫೬ ರಷ್ಟು ಇರುವ ಓಬಿಸಿ ಸಮುದಾಯಕ್ಕೆ ರಾಷ್ಟ್ರೀಯ ಪಕ್ಷಗಳು ೧೨೦ ಟಿಕೆಟ್‌ಗಳನ್ನು ನೀಡಬೇಕಾಗಿತ್ತು. ಆದರೆ, ಬಿಜೆಪಿ-೩೨ ಕಾಂಗ್ರೆಸ್-೪೧ ಟಿಕೆಟ್‌ಗಳನ್ನು ನೀಡಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಎಸ್ಸಿ/ಎಸ್ಟಿ ಮೀಸಲಾತಿಯಂತೆ ಓಬಿಸಿಗೂ ಕ್ಷೇತ್ರವಾರು ಮೀಸಲಾತಿ ನೀಡಬೇಕೆಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದು ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ಗುಳಗುಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗಳಿಗಾಗಿ ನಡೆಸಿರುವ ಸಮೀಕ್ಷೆ ನೆಪ ಮಾತ್ರಕ್ಕೆ ಆಗಿದೆ. ಸಮೀಕ್ಷೆ ವರದಿಯನ್ನು ಎರಡು ರಾಷ್ಟ್ರೀಯ ಪಕ್ಷಗಳು ಬಹಿರಂಗ ಪಡೆಸಬೇಕು. ಸಮೀಕ್ಷೆಯಲ್ಲಿ ಜನರು ತಿರಸ್ಕರಿಸಿದ ಜನಪ್ರತಿನಿಧಿಗೆ ಟಿಕೆಟ್ ನೀಡಿದ್ದಾರೆ ಇದಕ್ಕೆ ಮುಖ್ಯಮಂತ್ರಿಯವರು ಉತ್ತರ ನೀಡಬೇಕು ಎಂದು ಹೇಳಿದರು. ಶೇ.À ೧೫ ರಷ್ಟು ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯಕ್ಕೆ ೩೩ ಸ್ಥಾನಗಳನ್ನು ನೀಡಬೇಕೆಂದು ಎರಡು ಪಕ್ಷಿಗಳಿಗೆ ಮನವಿ ಮಾಡಲಾಗಿತ್ತು ಅದರಂತೆ ಗದಗ ಜಿಲ್ಲೆಯಲ್ಲಿ ಕುರುಬ ಸಮುದಾಯಕ್ಕೆ ಒಂದು ಸ್ಥಾನ ನೀಡದೆ ಅನ್ಯಾಯ ಮಾಡಿದ್ದಾರೆ. ರಾಜ್ಯದ ೨೨೪ ಕ್ಷೇತ್ರಗಳಲ್ಲಿ ೮೮ ಕ್ಷೇತ್ರಗಳಲ್ಲಿ ಕುರುಬ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದರೆ, ಬಿಜೆಪಿ-೭, ಕಾಂಗ್ರೆಸ್-೧೪ ಟಿಕೆಟ್ ನೀಡುವ ಮೂಲಕ ಕುರುಬ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿಲ್ಲ ಎಂದು ಆರೋಪಿಸಿದರು.
ಗದಗ ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ರವಿ ದಂಡಿನವರಿಗೆ ಹಾಗೂ ನರಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಕಾಶ ಕರಿ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಲಾಗಿತ್ತು, ಅವರಿಗೆ ಟಿಕೆಟ್ ನೀಡದೆ ಎರಡು ರಾಷ್ಟ್ರೀಯ ಪಕ್ಷಗಳು ಲಿಂಗಾಯತರಿಗೆ ಒಂದು ನ್ಯಾಯ, ಕುರುಬರಿಗೆ ಒಂದು ನ್ಯಾಯ ನೀಡುವ ಮೂಲಕ ಮುಂದುವರೆದ ಸಮಾಜಗಳು ಕುರುಬ ಸಮಾಜವನ್ನು ತುಳಿಯುತ್ತಿವೆ ಈ ಬಗ್ಗೆ ಜಾಗೃತಿ ಮೂಡಿಸಲು ಇದೇ ಎ. ೨೫ ರಂದು ನಗರದ ರಾಯಲ್ ವಿಲ್ಲಾದಲ್ಲಿ ಹಾಲುಮತ ಮಹಾಸಭಾ ವತಿಯಿಂದ ಪಕ್ಷಾತೀತವಾಗಿ ಚಿಂತನ ಸಭೆ ಕರೆದು ನ್ಯಾಯ ಒದಗಿಸುವ ನಾಯಕರಿಗೆ ಬೆಂಬಲ ಸೂಚಿಸಲಾಗುವುದು ಎಂದು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗಳಿ ಅವರು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಪಕೀರಪ್ಪ ಜಡಿ, ಸತೀಶ ಗಿಡ್ಡಹನಮಣ್ಣವರ, ಕುಮಾರ ಮಾರನಬಸರಿ, ಬಸವರಾಜ್ ಕುರಿ, ವೆಂಕಟೇಶ ಹೂವಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
Gadi Kannadiga > State > ರಾಷ್ಟ್ರೀಯ ಪಕ್ಷಗಳು ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿವೆ : ರುದ್ರಣ್ಣ ಗುಳಗುಳಿ
ರಾಷ್ಟ್ರೀಯ ಪಕ್ಷಗಳು ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿವೆ : ರುದ್ರಣ್ಣ ಗುಳಗುಳಿ
Suresh21/04/2023
posted on

More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023