ಬೆಳಗಾವಿ : ದಿ. ೦೮ ರಂದು ಮಹಾಂತೇಶ ನಗರದ ಬ್ರಹ್ಮಾಕುಮಾರಿ ಆಶ್ರಮದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನವನ್ನು ಆಚರಿಸಲಾಯಿತು. ಅಧ್ಯಕ್ಷ ಸ್ಥಾನ ಅಲಂಕರಿಸಿದ ರಾಜಯೋಗಿನಿ ಬ್ರಹ್ಮಾಕುಮಾರಿ ಅಂಬಿಕಾಜಿ ಮಾತನಾಡಿ ಹೇಗೆ ಅರ್ಜುನನಿಗೆ ಬಿಲ್ಲು ವಿದ್ಯೆಯ ಗಮನ ಪಕ್ಷಿಯ ಕಣ್ಣಿನಲ್ಲಿತ್ತೋ ಹಾಗೆ ಮನುಷ್ಯನ ಗಮನ ಶರೀರದಲ್ಲಿಯ ಆತ್ಮದ ಕಡೆಗೆ ಕೇಂದ್ರಿತವಾದಾಗ ಮನಸ್ಸಿನ ಮಾಲಿನ್ಯ ನಿವಾರಣೆಯಾಗಿ ಸ್ವಚ್ಚ ನಿರ್ಮಲ ಸಮಜ ನಿರ್ಮಾಣವಾಗಲು ಸಾಧ್ಯ. ಜೀವನದಲ್ಲಿ ಧ್ಯಾನ, ಸತ್ಕರ್ಮಗಳು ಗುಣಗಳ ಧಾರಣೆ ಅವಶ್ಯವೆಂದರು.
ಪ್ರಾಸ್ತವಿಕವಾಗಿ ಮಾತನಾಡುತ್ತ ಬ್ರಹ್ಮಾಕುಮಾರಿ ಪ್ರತಿಭಾ ಅವರು ಇಂದು ೫ ತತ್ವಗಳ ಮಾಲಿನ್ಯದ ಮಾಪನ ಮಾಡಲಾಗಿ ಅವುಗಳು ಎಲ್ಲೆ ಮೀರುತ್ತಿವೆ. ಭೂಮಿ ಸಹನೆಗೆ, ನೀರು ಭಾವನೆಗೆ ಗಾಳಿ ಗುಣಗಳಿಗೆ ಪರಸ್ಪರ ಸಂಬಂಧವಿದೆ, ಭೌತಿಕ ಪ್ರದೂಷಣೆಗಳಿಗಿಂತಲೂ ಮಾನಸಿಕ ಮಾಲಿನ್ಯದ ಪ್ರಭಾವ ಹೆಚ್ಚಾಗಿದೆ. ಆತ್ಮ ಕರ್ಮದ ¥s಼Àಲವನ್ನು ಭೋಗಿಸುತ್ತದೆ. ಸ್ವಯಂ ಪ್ರಕೃತಿ ಹಾಗು ಜಗತ್ತಿನ ಜಾಗೃತಿ ಶಿಕ್ಷಣದ ಅವಶ್ಯಕತೆ ಇದೆ. ಭಾವ ಭಾವನೆಗಳು ಒಂದಾದಾಗ ಸ್ವರ್ಣಿಮ ಜಗತ್ತಿನ ನಿರ್ಮಾಣ ಸಾಧ್ಯವೆಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದŒಶ್ರೀ. ಡಿ.ಆರ್.ಕುಮಾರಸ್ವಾಮಿ (ನಿವೃತ್ತ ಮುಖ್ಯ ಮಾಲಿನ್ಯ ನಿಯಂತ್ರಣಾಧಿಕಾರಿಗಳು) ಮಾತನಾಡಿ ಶ್ರದ್ಧೆ ತೀವ್ರವಾದಾಗ ಅಧ್ಯಾತ್ಮ ಬೆಳಗುತ್ತದೆ. ಕೇವಲ ನೀರಿನ ಸಂಸ್ಕರಣೆ ಮುಖ್ಯವಲ್ಲ, ಅದರಲ್ಲಿರಬೇಕಾದ ಅಂಶಗಳ ಕೊರತೆಯು ಮಾಲಿನ್ಯಕ್ಕೆ ಕಾರಣ. ಶರೀರಕ್ಕೆ ವಯಸ್ಸಾಗಿದೆ ಎಂದು ತಿಳಿದುಕೊಳ್ಳುವುದು ಒಂದು ಮಾಲಿನ್ಯ. ಮಣ್ಣು ನಾಶ ಮಾಡುವದರಿಂದ ಭವಿಷ್ಯದ ಪ್ರಕೃತಿಗೆ ಹಾನಿಯಾಗುತ್ತದೆ. ಅತಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಹಾಗು ಓಝೋನ್ ಪದರದ ನಾಶದಿಂದ ಮುಂದಿನ ಪೀಳಿಗೆಗೆ ತೊಂದರೆಯಾಗುತ್ತದೆ. ಧ್ಯಾನದಿಂದ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಶ್ರೀ. ಜಗದೀಶ ಆಯ್.ಎಚ್. (ಪರಿಸರ ಅಧಿಕಾರಿಗಳು) ಮಾತನಾಡಿ ಮೌಂಟ್ ಅಬು ಬ್ರಹ್ಮಾಕುಮಾರೀಸ್ ಮುಖ್ಯಾಲಯದಲ್ಲಿ ತಾವು ಕಂಡ ಸ್ವಚ್ಛ ಪರಿಸರದ ಅನುಭವ ತಿಳಿಸಿದರು. ಶ್ರೀ. ರಮೇಶ ಕುಮಾರ್ (ಚಿಕ್ಕೋಡಿ ಪರಿಸರ ಅಧಿಕಾರಿಗಳು) ಮಾತನಾಡಿ ಪ್ರತಿಯೊಬ್ಬರು ಭಾರತದ ಪ್ರಾಚೀನ ಪದ್ಧತಿಗಳನ್ನು ಅನುಸರಿಸುವುದು ಹಾಗು ಶಿಸ್ತು ಕಾನೂನು ಪಾಲನೆ ಬಹಳ ಅವಶ್ಯವಾಗಿದೆ ಎಂದರು.
ಬ್ರಹ್ಮಾಕುಮಾರ್ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು. ಬ್ರಹ್ಮಾಕುಮಾರ ಮನೋಹರ ಸ್ವಾಗತಿಸಿದರು. ಮಹಾಂತೇಶ ನಗರದ ಅನೇಕ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಲಾಭ ಪಡೆದರು.
Gadi Kannadiga > Local News > ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ