This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ವತಿಯಿಂದ ನವಸಂಕಲ್ಪ ಚಿಂತನಾ ಶಿಬಿರ


ಬೆಳಗಾವಿ: ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ಸಿನ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಅವರು ನವ ಚಿಂತನಾ ಶಿಬಿರದ ಆಯೋಜನೆಯ ಕುರಿತಾಗಿ ಮಾತನಾಡಿದರು.

ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಜರುಗಿರುವಂತ ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರದಂತೆ ಜಿಲ್ಲಾಮಟ್ಟದಲ್ಲಿ ಕೂಡಾ ಹಮ್ಮಿಕೊಳ್ಳಲಾಗಿದ್ದು, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ವಿಭಾಗದಿಂದ, 8 ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಕ್ಷೇತ್ರದ ಎಲ್ಲ ನಾಯಕರೂ ಶಾಸಕರು ಪದಾಧಿಕಾರಿಗಳು ಸೇರುವರು.

ಜೂನ್ ೨೪ರಂದು ಘಟಪ್ರಭಾದ ಎನ್ ಎಸ್ ಹರ್ಡೇಕರ್ ಸೇವಾದಳದಲ್ಲಿ ನಡೆಯುವ ಈ ಶಿಬಿರವು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಕೆಪಿಸಿಸಿ ಉಪಾಧ್ಯಕ್ಷರಾದ ವಿನಯ ಕುಲಕರ್ಣಿ ಅವರ ಸಹಭಾಗಿತ್ವದಲ್ಲಿ ವಿಭಾಗದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಈ ಚಿಂತನಾ ಶಿಬಿರದಲ್ಲಿ ಭಾಗಿಯಾಗುವರು ಎಂದು ತಿಳಿಸಿದರು.

ಈ ಚಿಂತನಾ ಶಿಬಿರದಲ್ಲಿ ಸುಮಾರು 250 ಪದಾಧಿಕಾರಿಗಳು ಭಾಗಿಯಾಗಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ಈ ಸಭೆ ನಡೆಯಲಿದ್ದು, ರೈತರ, ಮಹಿಳೆಯರ, ಯುವಕರ ಸಮಸ್ಯ ಹಾಗೂ ನಿರುದ್ಯೋಗ, ಸಮಕಾಲೀನ ರಾಜಕೀಯ ವಿದ್ಯಮಾನಗಳು, ಇಂತಾ ಹಲವಾರು ವಿಷಯಗಳ ಕುರಿತಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಮುಂದೆ ಪಕ್ಷ ಯಾವರೀತಿ ಮುನ್ನಡೆಯಬೇಕು, ಜನಪರವಾದ, ಸಮಾಜಮುಖಿಯಾದ ಕೆಲಸಗಳಲ್ಲಿ ಯಾವ ರೀತಿಯಲ್ಲಿ ಭಾಗಿಯಾಗಬೇಕು ಎಂದು ಚಿಂತನೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ಎಂ ಜೆ, ಹಾಗೂ ಪಕ್ಷದ ಇತರ ಮುಖಂಡರು ಭಾಗಿಯಾಗಿದ್ದರು.


Gadi Kannadiga

Leave a Reply