This is the title of the web page
This is the title of the web page

Please assign a menu to the primary menu location under menu

Local News

ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ್


ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಉದ್ಘಾಟನೆ ಮಾಡುವುದರ ಮೂಲಕ ಮೇಳಕ್ಕೆ ಚಾಲನೆ ನೀಡಿದರು.

ಗುರುವಾರ ನಗರ ಹ್ಯೂಮ್ ಪಾರ್ಕಿನಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮೇಳದಲ್ಲಿರುವ ಮಾವುಗಳ ವೀಕ್ಷಣೆ ಮಾಡಿದರು.
ಮಾವು ಮೇಳಕ್ಕೆ ಬೆಳಗಾವಿ, ಧಾರವಾಡ, ರತ್ನಾಗಿರಿಯಿಂದ ರೈತರು ಮಾವು ಮಾರಾಟಕ್ಕೆ ತಂದಿದ್ದು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ಹಾಗೂ ಕ್ಯಾಲ್ಸಿಯಮ್ ಕಾರ್ಬೈಡ್ ಮುಕ್ತ ಮಾವುಗಳನ್ನು ಮೇಳದಲ್ಲಿ ಮಾರಟಕ್ಕೆ ಮತ್ತು ಪ್ರದರ್ಶನಕ್ಕೆ ಏರ್ಪಡಿಸಲಾಗಿದ್ದು ನೋಡುಗರ ಬಾಯಲ್ಲಿ ನೀರೂರಿಸುತ್ತಿದ್ದವು.

ವಿವಿಧ ಮಾವಿನ ತಳಿಗಳ ಬಗ್ಗೆ ಮತ್ತು ತೋಟಗಾರಿಕೆಯ ಬಗ್ಗೆ ರೈತರೊಂದಿಗೆ ಮಾಹಿತಿಯನ್ನು ಪಡೆದ ಜಿಲ್ಲಾಧಿಕಾರಿಗಳು ಇದೇ ವೇಳೆ ರೈತರಿಗೆ ಶುಭಕೋರಿದರು.

ಈ ವೇಳೆ ಜಿ‌.ಪಂ ಕಾರ್ಯನಿರ್ವಾಹಕ ದರ್ಶನ್ ಎಚ್.ವ್ಹಿ ಮಾತನಾಡಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ವಿವಿದೆಡೆಯಿಂದ ರೈತರು ಆಗಮಿಸಿದ್ದು ಮಹಾರಾಷ್ಟ್ರದಿಂದ ರೈತರು ಮಾವು ಮಾರಾಟಕ್ಕೆ ತಂದಿರುವುದು ವಿಶೇಷವಾಗಿದೆ. ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ. ಖಾನಾಪುರದಲ್ಲಿ ಖಾಯಿ ಮಾವುವೆಂಬ ತಳಿಯ ಮಾವನ್ನು ಹೊಸದಾಗಿ ತಂದಿದ್ದಾರೆ ಕೇವಲ ಒಂದೇ ವರ್ಷದಲ್ಲಿ ಹಣ್ಣು ನೀಡುವ ಈ ಮಾವು ತುಂಬ ರುಚಿಯಾಗಿದೆ ಎಂದರು.

ತೋಟಗಾರಿಕೆ ಉಪನಿರ್ಧೇಶಕ ಮಹಾಂತೇಶ ಮುರಗೋಡ ಅವರು ಮಾತನಾಡಿ ಮಾವು ಮೇಳಕ್ಕೆ ಬೆಳಗಾವಿ ಜಿಲ್ಲೆ ಸೇರಿದಂತೆ ಧಾರವಾಡ, ಕೊಪ್ಪಳ, ಮಹರಾಷ್ಟ್ರ, ರತ್ನಗಿರಿ ಕಡೆಯಿಂದ ರೈತರು ಮಾವು ತಂದಿದ್ದು ರೈತರಿಗೆ ಮಾರಾಟಕ್ಕೆ ಉಚಿತ ಟೆಂಟ್ ಗಳನ್ನು ಕಲ್ಪಿಸಿಕೊಡಲಾಗಿದೆ. ನೈಸರ್ಗಿಕವಾಗಿ ಮಾಗಿದ ಹಣ್ಣುಗಳು ಮೇಳದಲ್ಲಿದ್ದು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಸಾರ್ವಜನೀಕರಿಗೆ ಮಾವು ಸಿಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆ ಸಿಬ್ಬಂದಿ ಜುಂಜುರವಾಡ ಅವರು ಮಾತನಾಡಿ ವಿವಿಧ ಬಾಗಗಳಿಂದ ಮಾವು ಬೆಳೆಗಾರರು ಮೇಳಕ್ಕೆ ಆಗಮಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ ಕಾರಣಕ್ಕೆ ಮಾವು ಮೇಳ ಮಾಡಲು ಸಾಧ್ಯವಾಗಿರಲಿಲ್ಲ ಈ ಭಾರಿ ಮತ್ತೆ ಮಾವು ಮೇಳ ಮಾಡಲಾಗಿದ್ದು ಉತ್ತಮ ಸ್ಪಂಧನೆ ಸಿಕ್ಕಿದೆ ಬೆಳಗಾವಿ ಜನತೇ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಒಟ್ಟಿನಲ್ಲಿ ಬೆಳಗಾವಿಯಲ್ಲಿ ನಾಲ್ಕು ದಿನಗಳ ಕಾಲ ಮಾವಿನ ಜಾತ್ರೆ ನಡೆಯಲಿದ್ದು ಬಗೆಬಗೆಯ ಮಾವು ಸಾರ್ವಜನೀಕರನ್ನು ಮೇಳದತ್ತ ಕೈಮಾಡಿ ಕರೆಯುತ್ತಿದ್ದು ಮಾವು ಪ್ರಿಯರಿಗೆ ಒಂದೆ ಸ್ಥಳದಲ್ಲಿ ವಿವಿಧ ತಳಿಯ ಮಾವಿನ ರುಚಿ ಸವಿಯುವ ಅವಕಾಶ ಕೂಡಿ ಬಂದಿದೆ.


Gadi Kannadiga

Leave a Reply