This is the title of the web page
This is the title of the web page

Please assign a menu to the primary menu location under menu

Local News

ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ರಕ್ತ ಮನುಷ್ಯನಿಂದಲೇ ಪಡೆಯಬೇಕು: ಡಾ. ಆನಂದ ಹೊಸೂರು


ಬೆಳಗಾವಿ: ಎಷ್ಟೋ ರೋಗಿಗಳು ಸಂಬಂಧಿಸಿದ ರಕ್ತದ ಗುಂಪು ಸಿಗದೇ ಸಾಯುವುದನ್ನು ಕಾಣುತ್ತೇವೆ. ಹಾಗಾಗಿ ವಿದ್ಯಾರ್ಥಿಗಳು ರಕ್ತದಾನದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಆನಂದ ಹೊಸೂರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಮತ್ತು ಎನ್. ಎಸ್. ಘಟಕದ ಸಂಯುಕ್ತ ಆಶ್ರಯದಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಅಂತಾರಾಷ್ಟ್ರೀಯ ಜಿನೇವಾ ಒಪ್ಪಂದದ ದಿನಾಚರಣೆ ಹಾಗೂ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ರಕ್ತದಾನ ಶಿಬಿರವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಆನಂದ ಹೊಸೂರು ಅವರು ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ರಕ್ತದ ಮಹತ್ವ ಎಲ್ಲರಿಗೂ ತಿಳಿದಿದೆ. ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ರಕ್ತವನ್ನು ಮನುಷ್ಯನಿಂದ ಮನುಷ್ಯನು ತೆಗೆದುಕೊಳ್ಳಬೇಕು. ವಿದ್ಯಾರ್ಥಿನಿಯರಲ್ಲಿ ಶೇ ಐವತ್ತರಷ್ಟು ಮಾತ್ರ ರಕ್ತ ಕೊಡಲು ಅರ್ಹತೆ ಹೊಂದಿದ್ದಾರೆ. ಇದು ಸುಧಾರಣೆ ಆಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ರಾಚವಿಯ ಯೂಥ್ ರೆಡ್ ಕ್ರಾಸ್‌ದ ನೋಡಲ್ ಅಧಿಕಾರಿಗಳಾದ ಡಾ. ಸುಮಂತ ಎಸ್ ಹಿರೇಮಠ ಅವರು ಮಾತನಾಡಿ ಯಾರಿಗೂ ರಕ್ತದಾನ ಮಾಡಲು ಒತ್ತಾಯ ಮಾಡುವುದಿಲ್ಲ. ಪ್ರತಿಯೊಬ್ಬರು ತಮ್ಮ ಆಧ್ಯ ಕರ್ತವ್ಯವೆಂದು ಭಾವಿಸಬೇಕು. ನಮ್ಮ ವಿಶ್ವವಿದ್ಯಾಲಯದಲ್ಲಿ ರಕ್ತದಾನ ಮಾಡುವವರ ಪಟ್ಟಿಯನ್ನು ನಾವು ಈಗಾಗಲೇ ಸಿದ್ಧ ಮಾಡಿದ್ದೇವೆ. ಈ ಮಹಾವಿದ್ಯಾಲಯದಲ್ಲಿಯೂ ಕೂಡ ಆ ರೀತಿಯ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ರೋಗಿಗಳಿಗೆ ತುರ್ತಾಗಿ ಸ್ಪಂದಿಸಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಥಮ ಚಿಕಿತ್ಸೆಯ ಕುರಿತು ಇನ್ನೊಂದು ಶಿಬಿರವನ್ನು ವಿಶ್ವವಿದ್ಯಾಲಯದ ರೆಡ್ ಕ್ರಾಸ್ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಅತಿಥಿಗಳಾದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಳಗಾವಿಯ ಇದರ ಅಧ್ಯಕ್ಷರಾದ ಅಶೋಕ ಬದಾಮಿ ಅವರು ಜಿನೇವಾ ಮತ್ತು ರೆಡ್ ಕ್ರಾಸ್ ಸಂಸ್ಥೆಗಿರುವ ಸಂಬಂಧ ಮತ್ತು ಅದರ ಚರಿತ್ರೆಯ ಕುರಿತು ವಿವರಿಸಿದರು. ಯುದ್ಧಕೈದಿ ಮತ್ತು ಯುದ್ಧದ ಸಂದರ್ಭದಲ್ಲಿ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಯ ಕುರಿತು ಜಿನೇವಾ ಒಪ್ಪಂದದಲ್ಲಿ ಚರ್ಚೆಯಾಗಿ ಜಾರಿಗೆ ಬಂದಿದೆ. ಹಾಗಾಗಿ ಜಿನೇವಾ ಒಪ್ಪಂದ ಬಹಳ ಮಹತ್ವದ ಒಪ್ಪಂದವಾಗಿದೆ. ರಕ್ತದಾನ ರೆಡ್ ಕ್ರಾಸ್ ಸಂಸ್ಥೆಯ ಸಾಮಾಜಿಕ ಸೇವೆಯಲ್ಲಿ ಒಂದು. ರಕ್ತದಾನ ಮಾಡುವುದರಿಂದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಂಕರ ತೇರದಾಳ ಅವರು ಪ್ರತಿಯೊಬ್ಬ ವಿದ್ಯಾರ್ಥಿಯು ರಕ್ತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ಗೈಯಬೇಕು. ಜೀವ ಇರುವಾಗ ರಕ್ತದಾನ ಮಾಡಿ, ಜೀವ ಹೋದ ಮೇಲೆ ಕಣ್ಣುದಾನ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ವೇದಿಕೆಯಲ್ಲಿ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿಯಾದ ಡಾ. ಪ್ರಿಯಾ ಪಾಟೀಲ್, ರಕ್ತನಿಧಿ ಅಧಿಕಾರಿಯಾದ ಡಾ. ಶ್ರೀದೇವಿ ಬೋಬಾಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಅರ್ಜುನ್ ಜಂಬಗಿ ನಿರೂಪಿಸಿದರು, ಮಹಾವಿದ್ಯಾಲಯದ ಯೂಥ್ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ಬಾಲಾಜಿ ಆಳಂದೆ ಸ್ವಾಗತಿಸಿದರು. ವಿದ್ಯಾರ್ಥಿ ಲಕ್ಷ್ಮಣ ನಾಯಿಕ ಪ್ರಾರ್ಥಿಸಿದರು, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಆದಿನಾಥ ಉಪಾಧ್ಯೆ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳಗಾವಿಯ ಆರ್ಥಿಕ ಅಂಕಿಸಂಖ್ಯೆಯ ನಿವೃತ್ತ ಉಪನಿರ್ದೇಶಕರಾದ ಆರ್. ಬಿ. ಬನಶಂಕರಿ, ಬೆಳಗಾವಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಾಕೃತಿಕ ವಿಕೋಪದ ನಿರ್ವಹಣಾ ತರಬೇತುದಾರರಾದ ಪ್ರವೀಣ ಹಿರೇಮಠ ಹಾಗೂ ಮಹಾವಿದ್ಯಾಲಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply