This is the title of the web page
This is the title of the web page

Please assign a menu to the primary menu location under menu

Local News

ಕೃಷಿಯೇತರ ಸಾಲಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು


ಯಮಕನಮರಡಿ: ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಕೃಷಿಯೇತರ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ದೂದಪ್ಪಾ (ರಾಮಣ್ಣ) ಶಿಂತ್ರೆ ಹೇಳೀದರು.
ಅವರು ದಿ. ೧೫ ರಂದು ಪಾಶ್ಚಾಪೂರದಲ್ಲಿ ಶ್ರೀ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ ಪಟ್ಟಣಶೆಟ್ಟಿ, ಸ್ವಾಗತಿಸಿ ಸಂಘದ ವಾರ್ಷಿಕ ವರದಿಯನ್ನು ಓದಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಶೈಲ ಪಟ್ಟಣಶೆಟ್ಟಿ, ನಿರ್ದೇಶಕರಾದ ಸಂಜೀವ ನಾಡಗೌಡ, ಮಲ್ಲಪ್ಪ ಸಾವಳಗಿ, ರಫೀಕ ಮದಿಹಳ್ಳಿ, ಉಲ್ಲಾಸ ಅನ್ವೇಕರ, ಕಲ್ಲಪ್ಪಾ ಹಿರೇಕುಡಿ, ಬಸಪ್ಪಾ ತಳವಾರ, ಲಗಮಣ್ಣಾ ಆಡಿಮನಿ, ಶಿವಲೀಲಾ ವಸ್ತ್ರದ, ಕಸ್ತೂರೆವ್ವಾ ಕಮತಗಿ, ಹಾಗೂ ಸಿಬ್ಬಂದಿಗಳಾದ ಸಂದೀಪ ಕಾಂದ್ರೆ, ಸಂಘದ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.


Gadi Kannadiga

Leave a Reply