This is the title of the web page
This is the title of the web page

Please assign a menu to the primary menu location under menu

Local News

ನೂಲಿ ಚಂದಯ್ಯ ಜಯಂತಿ ಆಚರಣೆ ಪೂರ್ವಭಾವಿ ಸಭೆ ಅರ್ಥಪೂರ್ಣ ಆಚರಣೆ ಸಿದ್ಧತೆ: ಈಶ್ವರ ಉಳ್ಳಾಗಡ್ಡಿ


ಬೆಳಗಾವಿ, ಆ.೬: ಸರ್ಕಾರವು ನೂಲಿ ಚಂದಯ್ಯನವರ ಜಯಂತಿಯನ್ನು ಹೊಸದಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಪ್ರಸ್ತುತ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗುವುದು ಎಂದು ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕರಾದ ಈಶ್ವರ ಉಳ್ಳಾಗಡ್ಡಿ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಆ.೬) ನಡೆದ ನೂಲಿ ಚಂದಯ್ಯ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೂಲಿ ಚಂದಯ್ಯನವರ ಜಯಂತಿ ಆಚರಣೆಗೆ ಅವಶ್ಯವಿರುವ ರೂಪರೇಷೆಗಳ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ, ಸಂಗೀತ ಕಾರ್ಯಕ್ರಮ ಹಾಗೂ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ತಾಲೂಕಾ ಮಟ್ಟದಲ್ಲೂ ಆಚರಣೆಗೆ ಮನವಿ:
ನಗರದ ಕೋಟೆ ಕೆರೆಯಿಂದ ಬಸವರಾಜ ಕಟ್ಟೀಮನಿ ಸಭಾ ಭವನದವರೆಗೆ ಮೆರವಣಿಗೆ ಕಾರ್ಯಕ್ರಮ ನಡೆಸಬೇಕು.ಜಿಲ್ಲಾ ರಂಗಮಂದಿರದಲ್ಲಿ ದುರಸ್ತಿ ಕಾರ್ಯ ಪ್ರಾರಂಭವಿದ್ದು, ನಗರದ ಗಾಂಧಿ ಭವನದಲ್ಲಿ ಜಯಂತಿ ಆಚರಣೆಯ ವೇದಿಕೆ ಕಾರ್ಯಕ್ರಮ ಏರ್ಪಡಿಸಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸಹ ಜಯಂತಿ ಆಚರಣೆ ಮಾಡುವುದಾಗಿ ಹಾಗೂ ತಾಲೂಕ ಮಟ್ಟದಲ್ಲಿಯೂ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ಸಭೆಯಲ್ಲಿ ಸಮಾಜದ ಮುಖಂಡರು ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರ ಉಳ್ಳಾಗಡ್ಡಿ ಅವರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಅವರು ನೂಲಿ ಚಂದಯ್ಯ ಜಯಂತಿ ಆಚರಣೆಯ ಕಾರ್ಯಕ್ರಮದ ರೂಪರೇಷೆಗಳ ಸಿದ್ಧತೆ ಕುರಿತು ವಿವರಿಸಿದರು.
ಅಖಿಲ ಕರ್ನಾಟಕ ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷ ರಾಮಜೀ ಭಜಂತ್ರಿ, ಕಿತ್ತೂರು ಕರ್ನಾಟಕ ವಿಭಾಗದ ಕುಳುವ ಸಮಾಜದ ಉಪಾಧ್ಯಕ್ಷರಾದ ಹನುಮಂತ ಭಜಂತ್ರಿ, ಮೂಡಲಗಿ ತಾಲೂಕಾ ಅಧ್ಯಕ್ಷರಾದ ರಾಜು ಭಜಂತ್ರಿ ಹಾಗೂ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply