This is the title of the web page
This is the title of the web page

Please assign a menu to the primary menu location under menu

Local News

ಕಲಾವಿದರ ಮಾಸಾಶನ; ದಾಖಲಾತಿ ಸಲ್ಲಿಸಲು ಸೂಚನೆ


ಬೆಳಗಾವಿ, ನ.೨೩ : ಬೆಳಗಾವಿ ಜಿಲ್ಲೆಯ ಕಷ್ಟ ಪರಿಸ್ಥಿತಿಯಲ್ಲಿರುವ ೫೩೭ ಜನ ಸಾಹಿತಿ/ಕಲಾವಿದರಿಗೆ ೧ ಸೆಪ್ಟೆಂಬರ್ ೨೦೨೨ ರಿಂದ ಜಾರಿಯಾಗುವಂತೆ ಮಾಸಿಕ ರೂ. ೨ ಸಾವಿರ ಮಾಸಾಶನ ಮಂಜೂರಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಸದರಿ ಸಾಹಿತಿ/ಕಲಾವಿದರಿಗೆ ಮಾದರಿ ಸಹಿ/ವೈಧ್ಯಕೀಯ ಪ್ರಮಾಣ ಪತ್ರ/ಆಧಾರ/ಬ್ಯಾಂಕ್ ಪಾಸಬುಕ್ ಝರಾಕ್ಸ ದಾಖಲೆಗಳನ್ನು ಈ ಕಚೇರಿಗೆ ಕಳುಹಿಸುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಕಲಾವಿದರು ನವಂಬರ್ ೩೦ ರೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಹಾಗೂ ಮರಣ ಹೊಂದಿದ ಸಾಹಿತಿ/ಕಲಾವಿದರ ಮರಣ ಪ್ರಮಾಣ ಪ್ರತವನ್ನು ಕುಟುಂಬದವರು ಈ ಕಚೇರಿಗೆ ಸಲ್ಲಿಸಬೇಕು.
ಅದೇ ರೀತಿ ಈಗಾಗಲೇ ಮಾಸಿಕ ರೂ. ೨ ಸಾವಿರ ಮಾಸಾಶನ ಹಾಗೂ ರೂ. ೫೦೦ ವಿಧವಾ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳು ನಿರ್ದೇಶನಾಲಯದ ಸೂಚನೆಯಂತೆ ತಾವು ಮಾಸಾಶನ ಪಡೆಯುವ ಬ್ಯಾಂಕಿನಿಂದ ಜೀವಿತಾವಧಿ ಪ್ರಮಾಣ ಪತ್ರದೊಂದಿಗೆ ಪಿಪಿಓ ಆದೇಶ/ಆಧಾರ/ಬ್ಯಾಂಕ್ ಪಾಸಬುಕ್ ಝರಾಕ್ಸ ದಾಖಲೆಗಳೊಂದಿಗೆ ನವಂಬರ್ ೩೦ ರೊಳಗೆ ಈ ಕಚೇರಿ ಸಲ್ಲಿಸಲು ತಿಳಿಸಲಾಗಿದೆ. ಮರಣ ಹೊಂದಿದ ಫಲಾನುಭವಿಗಳ ಮರಣ ಪ್ರಮಾಣ ಪ್ರತವನ್ನು ಕುಟುಂಬದವರು ಈ ಕಚೇರಿಗೆ ಸಲ್ಲಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply