ಬೆಳಗಾವಿ,ಅ.೧೫ : ಕಬ್ಬು ನುರಿಸುವ ಕಾರ್ಯಕ್ಕೆ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಚಾಲನೆ ನೀಡಿದ್ದು, ಹೊತ್ತಿಲ್ಲದ ಹೊತ್ತಿನಲ್ಲಿ ಟ್ರಾö್ಯಕ್ಟರ್ ಹಾಗೂ ಭಾರಿ ವಾಹನದ ಮೂಲಕ ಕಬ್ಬನ್ನು ಸಾಗಿಸುತ್ತಿರುವುದರಿಂದ ಚಿಕ್ಕೋಡಿ ಪಟ್ಟಣದಲ್ಲಿ ಪ್ರತಿದಿನ ಸಂಚಾರ್ ತಡೆ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇದನ್ನು ತಡೆಯಲು ಕಬ್ಬನ್ನು ಸುಗಮವಾಗಿ ಸಾಗಿಸಲು ಕೇಲವು ಸಂಚಾರಿ ನಿಯಮಗಳನ್ನು ಕಬ್ಬು ಸಾಗಿಸುವ ಮಾಲೀಕರು ಮತ್ತು ಚಾಲಕರು ಕಡ್ಡಾಯವಾಗಿ ಪಾಲಿಸಲು ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳು ತಿಳಿಸಿದ್ದಾರೆ.
ಕಬ್ಬನ್ನು ಸಾಗಿಸುವ ಟ್ರಾö್ಯಕ್ಟರ್ ಟ್ರಾಲಿ ಅತಿಯಾದ ಹೊರೆಯನ್ನು ಹೊಂದಿರಬಾರದು, ತಪ್ಪಿದ್ದಲ್ಲಿ ೨೦ ಸಾವಿರ ರೂ.ಗಳಿಗಿಂತ ಮೇಲ್ಪಟ್ಟು ದಂಡವನ್ನು ವಿಧಿಸಲಾಗುವುದು. ಟ್ರಾö್ಯಕ್ಟರ್ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಹೊಂದಿರಬೇಕು. ತಪ್ಪಿದ್ದಲ್ಲಿ ೫ ಸಾವಿರಕ್ಕಿಂತ ಮೇಲ್ಪಟ್ಟ ದಂಡವನ್ನು ವಿಧಿಸಲಾಗುವುದು. ಟ್ರಾö್ಯಕ್ಟರ್ ಕುರಿತು ಎಲ್ಲ ದಾಖಲೆಗಳನ್ನು (ಆರ್.ಸಿ, ವಿಮಾ ಇತ್ಯಾದಿ) ಹೊಂದಿರಬೇಕು.ಪ್ರತಿದಿನ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಬ್ಬು ತುಂಬಿದ ಟ್ರಾö್ಯಕ್ಟರನ್ನು ಬೆಳಿಗ್ಗೆ ೯ ರಿಂದ ೧೧ ಗಂಟೆವರೆಗೆ ಹಾಗೂ ಸಂಜೆ ೫ ರಿಂದ ೮ ಗಂಟೆ ಸಮಯದಲ್ಲಿ ಸಂಚಾರವನ್ನು ಟ್ರಾö್ಯಕ್ಟರ್ ಮಾಲೀಕರು ಆದಷ್ಟು ಕಡಿಮೆ ಮಾಡಬೇಕು. ತಪ್ಪಿದಲ್ಲಿ ಮೋಟಾರ್ ಕಾಯ್ದೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ ತಹಶೀಲ್ದಾರ ಗ್ರೇಡ್-೨ ಅವರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.
Gadi Kannadiga > Local News > ಸಂಚಾರ ತಡೆ : ಕಬ್ಬು ಸಾಗಿಸುವ ವಾಹನಗಳ ಮಾಲೀಕರಿಗೆ ಸೂಚನೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023