This is the title of the web page
This is the title of the web page

Please assign a menu to the primary menu location under menu

State

ಯಲಬುರ್ಗಾ : ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಮಾಹಿತಿ ಸಲ್ಲಿಸಲು ಸೂಚನೆ


ಕೊಪ್ಪಳ, ಸೆ. ೨೧ : ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ ವ್ಯಾಪ್ತಿಯ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಮಾಹಿತಿ ಸಲ್ಲಿಸಲು ಈ ಮೂಲಕ ಸೂಚನೆ ನೀಡಲಾಗಿದೆ.
ಯಲಬುರ್ಗಾ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಮರು ಸಮೀಕ್ಷೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳಾಗಿ ಕೆಲಸ ಮಾಡುತ್ತಿರುವವರು ಮೂರು ದಿನಗಳಲ್ಲಿ ಪಟ್ಟಣ ಪಂಚಾಯತಿಗೆ ಮಾಹಿತಿ ಒದಗಿಸಬೇಕು.
ಯಲಬುರ್ಗಾ ಪಟ್ಟಣದ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳಂತೆ ಕೆಲಸ ನಿರ್ವಹಿಸುತ್ತಿರುವವರನ್ನು ಗುರುತಿಸಿ ವಿಶೇಷ ಮರು ಸಮೀಕ್ಷೆಯನ್ನು ಕೈಗೊಳ್ಳಬೇಕಾಗಿರುತ್ತದೆ. “ಖಿhe Pಡಿohibiಣioಟಿ oಜಿ ಇm-Pಟoಥಿe meಟಿಣ ಚಿs ಒಚಿಟಿuಚಿಟ Sಛಿಚಿvಚಿeಟಿgiಟಿg ಚಿಟಿಜ ಖಿheiಡಿ ಖe-hಚಿbiಟiಣಚಿಣioಟಿ ಚಿಛಿಣ -೨೦೧೩” ಕಾಯ್ದೆಯ ರೀತ್ಯಾ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಸಮೀಕ್ಷೆ ನಡೆಸುವುದು ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಸೆಕ್ಷನ್ ೧೨ ರಂತೆ ನಗರ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳೆಂದು ಕೆಲಸ ನಿರ್ವಹಿಸುವಂತಹ ಕಾರ್ಮಿಕರು ಸ್ವಯ ಪ್ರೇರಿತವಾಗಿ ೦೩ ದಿನಗಳ ಒಳಗಾಗಿ ಮಾಹಿತಿ ಸಲ್ಲಿಸಬೇಕು. ಈ ಬಗ್ಗೆ ನೈಜತೆಯನ್ನು ಪರಿಶೀಲಿಸಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಾಗಿರುವುದು ಖಾತ್ರಿಯಾದಲ್ಲಿ ಅಂತಹವರನ್ನು ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಪಟ್ಟಿಗೆ ಸೇರಿಸಲು ನಿಯಮಾನುಸಾರ ಕ್ರಮವಹಿಸಬೇಕಾಗಿದೆ.
ಯಲಬುರ್ಗಾ ಪಟ್ಟಣದಲ್ಲಿ ಮ್ಯಾನ್ಯುಯಲ್ ಸ್ಕಾö್ಯವೆಂಜರ್ ಅಂತ ಕೆಲಸವನ್ನು ಮಾಡುವಂತಹವರು ಈ ಪ್ರಕಟಣೆಯ ದಿನಾಂಕದಿಂದ ೦೩ ದಿನಗಳ ಒಳಗಾಗಿ ಪಟ್ಟಣ ಪಂಚಾಯತಿಗೆ ನೇರವಾಗಿ ಬಂದು ನಿಮಗೆ ಸಂಬಂಧಿಸಿದ ದಾಖಲೆಗಳಾದ ಆಧಾರ ಕಾರ್ಡ್, ರೇಷನ್ ಕಾರ್ಡ್ ಆಥವಾ ಮತದಾರರ ಗುರುತಿನ ಪತ್ರ, ಬ್ಯಾಂಕ್ ಪಾಸ್ ಬುಕ್, ಇವುಗಳ ಮಾಹಿತಿಯನ್ನು ಬೆಳಿಗ್ಗೆ ೧೦-೩೦ ರಿಂದ ಸಾಯಂಕಾಲ ೫-೩೦ರ ವರೆಗೆ ಖುದ್ದಾಗಿ ಸಂಪರ್ಕಿಸಿ ನಿಖರವಾದ ಮಾಹಿತಿಯನ್ನು ತಿಳಿದುಕೊಂಡು ದಾಖಲೆಗಳನ್ನು ಸಹಾಯ ವಾಣಿಯಲ್ಲಿ ಪರಿಶೀಲಿಸಿ ಕೊಂಡು ಅರ್ಜಿ ಸಲ್ಲಿಸುವಂತೆ ಯಲಬುರ್ಗಾ ಪ.ಪಂ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply