This is the title of the web page
This is the title of the web page

Please assign a menu to the primary menu location under menu

Local News

ರಕ್ಕಸಕೊಪ್ಪ ಡ್ಯಾಂನಿಂದ ನದಿಗೆ ನೀರು ಬಿಡುವ ಸಾಧ್ಯತೆ : ಸಾರ್ವಜನಿಕರಿಗೆ ಸೂಚನೆ


ಬೆಳಗಾವಿ,ಜುಲೈ೧೬: ರಕ್ಕಸಕೊಪ್ಪ ಜಲಾಶಯದ ನೀರಿನ ಗರಿಷ್ಠ ಮಟ್ಟ ೨೪೭೫’ ಪೂಟ್ ಇದ್ದು, ಜುಲೈ ೧೬ ೨೦೨೨ ರಂದು ೨೪೭೨’ ಪೂಟ ನೀರು ಸಂಗ್ರಹವಾಗಿರುತ್ತದೆ. ಹಾಗೂ ರಕ್ಕಸಕೊಪ್ಪ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಯಾವುದೇ ಸಮಯದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇರುತ್ತದೆ.
ಹೀಗಾಗಿ ನದಿಗೆ ಜಲಾಶಯದ ನೀರನ್ನು ಯಾವುದೇ ಕ್ಷಣದಲ್ಲಿ ಹೊರ ಬಿಡÀಲಾಗುವುದು. ಆದ್ದರಿಂದ ನದಿಯಲ್ಲಿ ಪ್ರವಾಹವು ಹೆಚ್ಚಾಗುವ ಸಾಧ್ಯತೆ ಇದ್ದ ಕಾರಣ ರಕ್ಕಸಕೊಪ್ಪ ಜಲಾಶಯದ ಕೆಳಪ್ರದೇಶದ ಮಾರ್ಕಂಡೆಯ ನದಿಯ ದಡದಲ್ಲಿರುವ ಜನರು ಎಚ್ಚರಿಕೆೆಯಿಂದ ಇರಬೇಕೆಂದು ಕ.ನ.ನೀ.ಸ. ಮತ್ತು ಒ.ಚ. ಮಂಡಳಿ, ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply