ಬೆಳಗಾವಿ, ಏ.೧೯: ರಾಜ್ಯ ಸ್ವಾತಂತ್ರö್ಯ ಯೋಧರ ಪಿಂಚಣಿ ಹಾಗೂ ಗೋವಾ ವಿಮೋಚನಾ ಚಳುವಳಿಯ ಪಿಂಚಣಿಯನ್ನು ಪಡೆಯುತ್ತಿರುವ ಅರ್ಹ ಫಲಾನುಭವಿಗಳು ತಮ್ಮ ವಿವರಗಳನ್ನು ಡಿಬಿಟಿ ತಂತ್ರಾಂಶದಲ್ಲಿ ಅಳವಡಿಸಬೇಕಾಗಿರುವ ಕಾರಣ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆಧಾರ ಕಾರ್ಡ ಜೆರಾಕ್ಸ್ ಹಾಗೂ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಹಾಗೂ ಜೀವಿತ ಪ್ರಮಾಣ ಪತ್ರಗಳನ್ನು ಫಲಾನುಭವಿಗಳ ಜೊತೆಗಾರರು ಕೂಡಲೇ ಜಿಲ್ಲಾಧಿಕಾರಿಗಳ ಕಾರ್ಯಾಲಯದ ರೂ.ನಂ. ೦೫ ರಲ್ಲಿ ಸಲ್ಲಿಸತಕ್ಕದ್ದು.
ದೂರದ ತಾಲ್ಲೂಕಿನವರು ತಮ್ಮ ತಾಲ್ಲೂಕು ಕಛೇರಿಯ ಸ್ವಾತಂತ್ರö್ಯ ಯೋಧರ ವಿಷಯ ನಿರ್ವಾಹಕರ ಹತ್ತಿರ ಏಪ್ರಿಲ್.೨೫ ೨೦೨೩ ರೊಳಗಾಗಿ ಸಲ್ಲಿಸಬಹುದು. ಈಗಾಗಲೇ ಈ ಕಾರ್ಯಾಲಯಕ್ಕೆ ಅಥವಾ ಸಂಬಂಧಿಸಿದ ತಹಶೀಲ್ದಾರ ಕಛೇರಿಯಲ್ಲಿ ಸಲ್ಲಿಸಿದ್ದಲ್ಲಿ ಅಂತಹವರನ್ನು ಹೊರತುಪಡಿಸಿ ಉಳಿದವರು ಕೂಡಲೇ ಸಲ್ಲಿಸಬೇಕು.
ತಪ್ಪಿದ್ದಲ್ಲಿ ಏಪ್ರಿಲ್-೨೦೨೩ ನೇ ಮಾಹೆಯ ಪಿಂಚಣಿಯನ್ನು ತಮ್ಮ ಖಾತೆಗೆ ಜಮಾ ಮಾಡಲಾಗುವುದಿಲ್ಲ ಹಾಗೂ(ಪಿಂಚಣಿದಾರರನ್ನು ಕರೆತರಬಾರದು ಅವರ ಜೊತೆಗಾರರು ಮಾತ್ರ ದಾಖಲೆಗಳನ್ನು ಈ ಕಾರ್ಯಾಲಯಕ್ಕೆ ತಂದು ಸಲ್ಲಿಸತಕ್ಕದ್ದು).ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.
Gadi Kannadiga > Local News > ರಾಜ್ಯ ಸ್ವಾತಂತ್ರö್ಯ ಹಾಗೂ ಗೋವಾ ಸ್ವಾತಂತ್ರö್ಯ ಹೋರಾಟಗಾರರ ದಾಖಲಾತಿಗಳ ಸಲ್ಲಿಸಲು ಸೂಚನೆ
ರಾಜ್ಯ ಸ್ವಾತಂತ್ರö್ಯ ಹಾಗೂ ಗೋವಾ ಸ್ವಾತಂತ್ರö್ಯ ಹೋರಾಟಗಾರರ ದಾಖಲಾತಿಗಳ ಸಲ್ಲಿಸಲು ಸೂಚನೆ
Suresh19/04/2023
posted on